ಶ್ರೀನಗರ

ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್‌ಕೌಂಟರ್‌; ಇಬ್ಬರು ಉಗ್ರರು ಸಾವು

ಅನಂತನಾಗನಿಂದ ಶ್ರೀನಗರಕ್ಕೆ ಹೊರಟ್ಟಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್‌ಕೌಂಟರ್‌ ನಡೆಸಿ ಕೊಂದಿವೆ. ಮಂಗಳವಾರ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಇಬ್ಬರು ಯೋಧರು ಹಾಗೂ ಬಿಹಾರದ ಮಹಿಳಾ ಪ್ರವಾಸಿಗರೊಬ್ಬರು ಗಾಯಗೊಂಡಿದ್ದಾರೆ.

ಶ್ರೀನಗರ (ಪಿಟಿಐ): ಅನಂತನಾಗನಿಂದ ಶ್ರೀನಗರಕ್ಕೆ ಹೊರಟ್ಟಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್‌ಕೌಂಟರ್‌ ನಡೆಸಿ ಕೊಂದಿವೆ.

ಮಂಗಳವಾರ ಈ ಘಟನೆ ನಡೆದಿದ್ದು,ಘಟನೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಇಬ್ಬರು ಯೋಧರು ಹಾಗೂ ಬಿಹಾರದ ಮಹಿಳಾ ಪ್ರವಾಸಿಗರೊಬ್ಬರು ಗಾಯಗೊಂಡಿದ್ದಾರೆ.

ಉಗ್ರರ ಚಲವಲನದ ಬಗ್ಗೆ ಗುಪ್ತಚರದಿಂದ ದೊರೆತ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಶ್ರೀನಗರ ಹೊರವಲಯದ ಪಾಮ್‌ಪೊರ್‌ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ನಲ್ಲಿ ಪಿಕ್‌ಅಪ್ ವ್ಯಾನವೊಂದನ್ನು ನಿಲ್ಲಿಸುವಂತೆ ಸಂಜ್ಞೆ ಮಾಡಲಾಯಿತು. ಈ ಬೆನ್ನಲ್ಲೆ ಗುಂಡಿನ ದಾಳಿ ಆರಂಭಗೊಂಡಿತು ಎಂದು ಪೊಲೀಸ್ ಹಾಗೂ ಸಿಆರ್‌ಪಿಎಫ್‌ ಹೇಳಿವೆ.

ವಾಹನದಿಂದ ಇಳಿದ ಉಗ್ರರು ಚೆಕ್‌ಪೋಸ್ಟ್‌ ಪಕ್ಕದಲ್ಲೇ ಇರುವ ಸಿಆರ್‌ಪಿಎಫ್‌ ಶಿಬಿರದ ಮೇಲೆ ಗ್ರೈನೆಡ್‌ ತೂರಿದರು. ಮುಖ್ಯದ್ವಾರದತ್ತ ಗುಂಡಿನ ಮಳೆಗೈದರು ಎಂದು ಸಿಆರ್‌ಪಿಎಫ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ಕೂಡಲೇ ಸುತ್ತುವರಿದ ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿ ಇಬ್ಬರು ಉಗ್ರರನ್ನು ಕೊಂದರು ಎಂದು ಪೊಲೀಸರು ತಿಳಿಸಿದ್ದಾರೆ.

Comments