ಕೋಲ್ಕತ್ತ

ದೆಹಲಿಗೆ ಬಂದ ಸಿ.ಎಂ ಮಮತಾ

ಮೂರು ದಿನಗಳ ಭೇಟಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನವದೆಹಲಿಗೆ ತೆರಳಿದ್ದಾರೆ.

ಕೋಲ್ಕತ್ತ: ಮೂರು ದಿನಗಳ ಭೇಟಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನವದೆಹಲಿಗೆ ತೆರಳಿದ್ದಾರೆ.
2016ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸುಲಭವಾಗಿ ಅಧಿಕಾರಿ ಹಿಡಿಯುವ ಕಾರ್ಯತಂತ್ರ ರೂಪಿಸಲು  ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ರಾಜಕೀಯ ವಲಯ ವಿಶ್ಲೇಷಿಸಿದೆ.

ಮಮತಾ ಅವರು ಈ 9ರಂದು ಬುಧವಾರ  ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಲಿದ್ದಾರೆ. ರಾಜ್ಯಕ್ಕೆ ದೊಡ್ಡ ಮೊತ್ತದ ಸಾಲ ಹಾಗೂ ನಿಗದಿಪಡಿಸಿರುವ ಹಣವನ್ನು ನೀಡುವಂತೆ ಮತ್ತೊಮ್ಮೆ ಪ್ರಧಾನಿಯನ್ನು ಕೋರುವುದು ಅವರ ಭೇಟಿಯ ಉದ್ದೇಶ.

Comments