ಮುಂಬೈ

ದಾವೂದ್‌ ಇಬ್ರಾಹಿಂಗಿಂತ ಅಜಂ ಅಪಾಯಕಾರಿ: ಶಿವಸೇನಾ

ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗಿಂತ ಎಸ್‌ಪಿ ಮುಖಂಡ ಅಜಂ ಖಾನ್‌  ಹೆಚ್ಚು ಅಪಾಯಕಾರಿ ವ್ಯಕ್ತಿ ಎಂದು ಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಆರೋಪಿಸಿದೆ.

ಮುಂಬೈ (ಪಿಟಿಐ): ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗಿಂತ ಎಸ್‌ಪಿ ಮುಖಂಡ ಅಜಂ ಖಾನ್‌  ಹೆಚ್ಚು ಅಪಾಯಕಾರಿ ವ್ಯಕ್ತಿ ಎಂದು ಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಆರೋಪಿಸಿದೆ.

ರಾಷ್ಟ್ರದ ಹಿತಾಸಕ್ತಿ ವಿರುದ್ಧ ಎಂದೂ ಮಾತನಾಡದ  ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿಯಿಂದ ಅಜಂ ಖಾನ್‌ ಬುದ್ದಿ ಕಲಿಯಬೇಕು ಎಂದು ಶಿವಸೇನಾ ತಿಳಿಸಿದೆ.  

 ಬಾಬ್ರಿ ಮಸೀದಿ ಧ್ವಂಸ ಮಾಡದಿದ್ದರೆ ಮುಂಬೈ ದಾಳಿ ನಡೆಯುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದ ಅಜಂ ಖಾನ್‌ ಪರೋಕ್ಷವಾಗಿ ಉಗ್ರರಿಗೆ ಸಹಕರಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಪ್ಯಾರಿಸ್‌ನಲ್ಲಿ ಸ್ಫೋಟ ಪ್ರಕರಣ ನಡೆದಾಗ ಯೂರೋಪ್‌ ರಾಷ್ಟ್ರಗಳು ಸಿರಿಯಾದಲ್ಲಿ ಕೈಗೊಂಡ ಕ್ರಮಕ್ಕೆ ಪ್ರತೀಕಾರವಾಗಿ ಈ ಘಟನೆ ನಡೆದಿದೆ ಎಂದು ಹೇಳುವ ಮೂಲಕವೂ ಅವರು ಉಗ್ರರಿಗೆ ಬೆಂಬಲ ನೀಡಿದ್ದರು ಎಂದು ಟೀಕಿಸಿದೆ.

‘ನಮ್ಮ ದೇಶದೊಳಗೇ ಇಂತಹ ಹಾವುಗಳು ಮತ್ತು ಮೊಸಳೆಗಳು ಇರುವಾಗ ಹೊರಗಿನ ವೈರಿಗಳು ನಮಗೆ ಬೇಕಾಗುವುದಿಲ್ಲ. ದಾವೂದ್‌ನನ್ನು ಪಾಕಿಸ್ತಾನದಿಂದ ವಾಪಸ್‌ ಕರೆತರಬಹುದು ಅಥವಾ ಕರೆತರದೇ ಇರಬಹುದು. ಆದರೆ ಅಜಂ ಅವರಂತಹ ವ್ಯಕ್ತಿ ದಾವೂದ್‌ ಇಬ್ರಾಹಿಂಗಿಂತ ದೇಶದೊಳಗೆ ಹೆಚ್ಚು ಅಪಾಯಕಾರಿ ಚಟುವಟಿಕೆ ನಡೆಸುತ್ತಾರೆ ಎಂದು ಕಿಡಿಕಾರಿದೆ.

Comments