ಪುಣೆ

ಮಾರ್ಚ್‌ 7ಕ್ಕೆ ಸಂಜಯ್‌ ದತ್‌ ಜೈಲಿನಿಂದ ಬಿಡುಗಡೆ

ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್‌ ನಟ ಸಂಜಯ್ ದತ್‌ ಅವರು 2016ರ ಮಾರ್ಚ್‌ 7ರಂದು ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಕೊನೆ ಕ್ಷಣದಲ್ಲಿ ಯಾವುದೇ ತೊಡಕುಗಳು ಉಂಟಾಗದೇ ಇದ್ದರೆ ದತ್‌ ಬಿಡುಗಡೆ ಖಚಿತ ಎನ್ನಲಾಗಿದೆ.

ಪುಣೆ (ಐಎಎನ್‌ಎಸ್‌): ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್‌ ನಟ ಸಂಜಯ್ ದತ್‌ ಅವರು 2016ರ ಮಾರ್ಚ್‌ 7ರಂದು ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಕೊನೆ ಕ್ಷಣದಲ್ಲಿ ಯಾವುದೇ ತೊಡಕುಗಳು ಉಂಟಾಗದೇ ಇದ್ದರೆ ದತ್‌ ಬಿಡುಗಡೆ ಖಚಿತ ಎನ್ನಲಾಗಿದೆ.

ಟಾಡಾದ ಅಡಿ ದಾಖಲಾಗಿದ್ದ ಭಯೋತ್ಪಾದನಾ ಚಟುವಟಿಕೆಗಳ ಆರೋಪದಿಂದ ಮುಕ್ತರಾಗಿದ್ದರೂ, ದತ್‌ ಅವರನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಲಾಗಿತ್ತು.

ಈ ತೀರ್ಪನ್ನು ಸುಪ್ರೀಂಕೋರ್ಟ್‌  2013ರ ಮಾರ್ಚ್‌ನಲ್ಲಿ ಎತ್ತಿಹಿಡಿದಿತ್ತು.

ದತ್‌ ಅವರು 18 ತಿಂಗಳು ವಿಚಾರಣಾಧೀನ ಕೈದಿಯಾಗಿದ್ದರು. ಐದು ವರ್ಷದಲ್ಲಿ ಈ ಅವಧಿಯನ್ನು ಕಳೆದು ಅವರು 42 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿತ್ತು. ಸುಪ್ರೀಂ ಕೋರ್ಟ್‌ ಆದೇಶದ ನಂತರ 2013ರ ಮೇ 16ರಂದು ಅವರು ಶರಣಾಗಿದ್ದರು.

ಉತ್ತಮ ನಡತೆ ಮತ್ತು ಇತರ ಕಾರಣಗಳಿಂದ 2016ರ ಮಾರ್ಚ್‌ 7ಕ್ಕೆ ಅವರ ಶಿಕ್ಷೆಯ ಅವಧಿ ಮುಗಿಯಲಿದೆ ಎಂದು ಮೂಲಗಳು ಹೇಳಿವೆ.

ಪೆರೋಲ್ ಮತ್ತು ಗೈರು ಹಾಜರಿ ರಜೆ  (ಫರ್ಲೊ) ಮೇಲೆ ದತ್‌ ಹಲವು ಬಾರಿ ಜೈಲಿನಿಂದ ಹೊರಗೆ ಬಂದಿದ್ದರು. ಇದು ಟೀಕೆಗೂ ಒಳಗಾಗಿತ್ತು.

Comments