ಮುಂಬೈ

ಸೆನ್ಸಾರ್‌ ಮಾಡಿದ ದೃಶ್ಯಗಳು ಆನ್‌ಲೈನ್‌ನಲ್ಲಿ

‘ಆ್ಯಂಗ್ರಿ ಇಂಡಿಯನ್‌ ಗಾಡೆಸಸ್‌’ ಹಿಂದಿ ಸಿನೆಮಾದಲ್ಲಿ ಸೆನ್ಸಾರ್‌ ಮಂಡಳಿ ಕತ್ತರಿ ಪ್ರಯೋಗ ಮಾಡಿದ್ದ ಸಂಭಾಷಣೆ ಮತ್ತು ದೃಶ್ಯಗಳನ್ನೊಳಗೊಂಡ ವಿಡಿಯೊ ತುಣುಕುಗಳು ಮಂಗಳವಾರ ಆನ್‌ಲೈನ್‌ನಲ್ಲಿ ಹರಿದಾಡಿ ಸುದ್ದಿ ಮಾಡಿದವು.

ಮುಂಬೈ (ಪಿಟಿಐ): ‘ಆ್ಯಂಗ್ರಿ ಇಂಡಿಯನ್‌ ಗಾಡೆಸಸ್‌’ ಹಿಂದಿ ಸಿನೆಮಾದಲ್ಲಿ ಸೆನ್ಸಾರ್‌ ಮಂಡಳಿ ಕತ್ತರಿ ಪ್ರಯೋಗ ಮಾಡಿದ್ದ ಸಂಭಾಷಣೆ ಮತ್ತು ದೃಶ್ಯಗಳನ್ನೊಳಗೊಂಡ ವಿಡಿಯೊ ತುಣುಕುಗಳು ಮಂಗಳವಾರ ಆನ್‌ಲೈನ್‌ನಲ್ಲಿ ಹರಿದಾಡಿ ಸುದ್ದಿ ಮಾಡಿದವು.

ಪಾನ್‌ ನಳಿನ್‌ ನಿರ್ದೇಶನದ ಈ ಚಿತ್ರದಲ್ಲಿ ಸೆನ್ಸಾರ್‌ ಮಂಡಳಿ ಕತ್ತರಿ ಹಾಕಿದ್ದ ‘ನನಗೆ ಭಾರತೀಯ ಮೈಕಟ್ಟು ಇದೆ’, ‘ತೀರ್ಮಾನ ಕೈಗೊಳ್ಳಲು ಸರ್ಕಾರ ಕ್ಕೆ ಯಾವ ಹಕ್ಕಿದೆ?’ ಮುಂತಾದ ಸಂಭಾಷಣೆ ಹಾಗೂ ಕೆಲವು ದೃಶ್ಯಗಳುಳ್ಳ ಒಂದು ನಿಮಿಷದ ತುಣುಕು ಫೇಸ್‌ಬುಕ್‌ನಲ್ಲಿ ಹರಿದಾಡಿತು.

ಫೇಸ್‌ಬುಕ್‌ನಲ್ಲಿ ಸಿನೆಮಾದ ಅಧಿಕೃತ  ಪುಟದಲ್ಲಿ ನಿರ್ದೇಶಕರು ಈ ವಿಡಿಯೊ ತುಣುಕು ಅಪ್‌ಲೋಡ್‌ ಮಾಡಿದ್ದಾರೆ.

Comments