ನಕಲಿ ಪ್ರಮಾಣ ಪತ್ರ ಸಲ್ಲಿಸಿದ ಪ್ರಕರಣ

ನಾಗಾಲ್ಯಾಂಡ್‌ ಮುಖ್ಯಮಂತ್ರಿಗೆ ಸಮನ್ಸ್‌

ಶೈಕ್ಷಣಿಕ ಅರ್ಹತೆ ಪ್ರಕರಣದ ಸಂಬಂಧ ಜನವರಿ 7ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನಾಗಾಲ್ಯಾಂಡ್‌ ಮುಖ್ಯಮಂತ್ರಿ ಟಿ.ಆರ್‌.ಜೆಲಿಯಾಂಗ್‌ ಅವರಿಗೆ ಕೊಹಿಮಾ ಸ್ಥಳೀಯ ನ್ಯಾಯಾಲಯ ಸೂಚಿಸಿದೆ.

ಕೊಹಿಮಾ (ಐಎಎನ್ಎಸ್‌): ಶೈಕ್ಷಣಿಕ ಅರ್ಹತೆ ಪ್ರಕರಣದ ಸಂಬಂಧ ಜನವರಿ 7ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನಾಗಾಲ್ಯಾಂಡ್‌ ಮುಖ್ಯಮಂತ್ರಿ ಟಿ.ಆರ್‌.ಜೆಲಿಯಾಂಗ್‌ ಅವರಿಗೆ ಇಲ್ಲಿನ ನ್ಯಾಯಾಲಯ ಸೂಚಿಸಿದೆ.

ನಾಗಾಲ್ಯಾಂಡ್‌ ಫ್ರಂಟ್‌ ನಾಯಕ ಜೆಲಿಯಾಂಗ್‌ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ.ಮುಖ್ಯಮಂತ್ರಿ ಅವರು ಕೊಹಿಮಾ ಕಾಲೇಜಿನಿಂದ ಪಡೆದ ಪದವಿ ಪ್ರಮಾಣ ಪತ್ರಗಳು ನಕಲಿ ಎಂದು ನಾಗಾಲ್ಯಾಂಡ್‌ ನಿವಾಸಿಯೊಬ್ಬರು  ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಕೋರ್ಟ್‌ ಮೆಟ್ಟಿಲೇರಿದ್ದು ವಿಚಾರಣೆ ನಡೆಯುತ್ತಿದೆ.

ನ್ಯಾಯಾಲಯದ ನಿರ್ದೇಶನದ ನಂತರ  ಕೊಹಿಮಾ ಕಾಲೇಜಿನ ಪ್ರಾಂಶುಪಾಲರು ಮುಖ್ಯಮಂತ್ರಿ ಅವರ ಶೈಕ್ಷಣಿಕ ದಾಖಲೆಯ ವಿವರ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

ಜೆಲಿಯಾಂಗ್‌ ಅವರು 1979ರಲ್ಲಿ ಬಿ.ಎ. ಪರೀಕ್ಷೆ ಬರೆದಿದ್ದಾರೆ. ಆದರೆ, ಎಲ್ಲ ವಿಷಯಗಳಲ್ಲೂ ಅನುತ್ತೀರ್ಣರಾಗಿದ್ದಾರೆ. ನಂತರ 1980ರಲ್ಲಿ ನಡೆದ ಪರೀಕ್ಷೆಯನ್ನು ಅವರು ತೆಗೆದುಕೊಂಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ನ್ಯಾಯಾಲಯ ಹೇಳಿದೆ.

Comments