ಮುಂಬೈ

‘ಹೆಡ್ಲಿ ಮಾಫಿ ಸಾಕ್ಷಿ: ಚತುರ ನಿರ್ಧಾರ’

ಮುಂಬೈ ದಾಳಿ ಪ್ರಕರಣದಲ್ಲಿ ಲಷ್ಕರ್ ಉಗ್ರ ಹೆಡ್ಲಿಯನ್ನು ಮಾಫಿ ಸಾಕ್ಷಿಯಾಗಿಸಿದ ಪೊಲೀಸರ ಜಾಣ್ಮೆಯ ಕ್ರಮವನ್ನು ಮುಂಬೈನ ನಿವೃತ್ತ ಪೊಲೀಸ್ ಆಯುಕ್ತ ಎಂ.ಎನ್.ಸಿಂಗ್ ಪ್ರಶಂಶಿಸಿದ್ದಾರೆ. ಇದರಿಂದ ಇಡೀ ಪ್ರಕರಣದಲ್ಲಿ ಪಾಕಿಸ್ತಾನದ ಸಂಚು ಬಯಲಾಗಲಿದೆ ಎಂದು ಅವರು ಹೇಳಿದ್ದಾರೆ.

ಮುಂಬೈ (ಪಿಟಿಐ):  ಮುಂಬೈ ದಾಳಿ ಪ್ರಕರಣದಲ್ಲಿ ಲಷ್ಕರ್ ಉಗ್ರ ಹೆಡ್ಲಿಯನ್ನು ಮಾಫಿ ಸಾಕ್ಷಿಯಾಗಿಸಿದ ಪೊಲೀಸರ ಜಾಣ್ಮೆಯ ಕ್ರಮವನ್ನು ಮುಂಬೈನ ನಿವೃತ್ತ ಪೊಲೀಸ್ ಆಯುಕ್ತ ಎಂ.ಎನ್.ಸಿಂಗ್ ಪ್ರಶಂಶಿಸಿದ್ದಾರೆ. ಇದರಿಂದ ಇಡೀ ಪ್ರಕರಣದಲ್ಲಿ ಪಾಕಿಸ್ತಾನದ ಸಂಚು ಬಯಲಾಗಲಿದೆ ಎಂದು ಅವರು ಹೇಳಿದ್ದಾರೆ.

‘ಮುಂಬೈ ದಾಳಿ ಬಳಿಕ ಸೆರೆಸಿಕ್ಕಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ಈಗಿಲ್ಲ. ದಾಳಿ ನಡೆಸಿದ್ದ ಒಂಬತ್ತು ಉಗ್ರರೂ ಸತ್ತಿದ್ದಾರೆ. ಹೀಗಾಗಿ  ಹೆಡ್ಲಿ ತಾನು ಮಾಫಿ ಸಾಕ್ಷಿಯಾಗಲು ಒಪ್ಪದ್ದು ಒಳ್ಳೆಯ ಬೆಳವಣಿಗೆ. ಹೆಡ್ಲಿ ವಿಚಾರಣೆ ಬಳಿಕ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಹಾಗೂ ಐಎಸ್‌ಐ ಕೈವಾಡ ಬಯಲಾಗಲಿದೆ’ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ವಿಚಾರಣೆ ವೇಳೆ ಕಸಬ್ ನೀಡಿದ್ದ ಮಾಹಿತಿಗೂ, ಹೆಡ್ಲಿಯ ತಪ್ಪೊಪ್ಪಿಗೆ ಹೇಳಿಕೆಗೂ, ಮುಂಬೈ ದಾಳಿ ವೇಳೆ ಉಗ್ರ ಮಧ್ಯೆ ನಡೆದಿದ್ದ ದೂರವಾಣಿ ಸಂಭಾಷಣೆಗೂ ದೃಢೀಕರಣ ಸಿಗಲಿದೆ. ತಾನು ಮಾಡಿದ ಸಂಚನ್ನು ಉಗ್ರ ಹೆಡ್ಲಿ ತಪ್ಪೊಪ್ಪಿಕೊಂಡಿದ್ದು, ಮುಂದಿನ ವಿಚಾರಣೆಯಲ್ಲಿ ಆತನ ಪ್ರತಿಯೊಂದು ಮಾತೂ ನಿರ್ಣಾಯಕವಾಗಲಿವೆ’ ಎಂದು ನಿವೃತ್ತ ಪೊಲೀಸ್ ಆಯುಕ್ತ ಎಂ.ಎನ್.ಸಿಂಗ್ ಹೇಳಿದ್ದಾರೆ.

ಮುಂಬೈ ದಾಳಿಯ ಮುಖ್ಯ ಕಾರಣಕರ್ತ ಹಫೀಸ್ ಸಯೀದ್ ವಿರುದ್ಧ ಯಾವುದೇ ಸಾಕ್ಷ್ಸ ಇಲ್ಲ ಎನ್ನುವ ಪಾಕ್‌ನ್ನು ನಂಬುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

Comments