ಕೋಲ್ಕತ್ತ

10 ದಿನದಲ್ಲಿ ಸಾವಿರ ಐಐಟಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ

ಪಶ್ಚಿಮಬಂಗಾಳದ ಖರಗ್‌ಪುರ ಐಐಟಿಯಲ್ಲಿ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ  ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ 10 ದಿನದಲ್ಲಿ ಲಾಭದಾಯಕ ಉದ್ಯೋಗಾವಕಾಶ ದೊರೆತಿದೆ.

ಕೋಲ್ಕತ್ತ (ಪಿಟಿಐ): ಪಶ್ಚಿಮಬಂಗಾಳದ ಖರಗ್‌ಪುರ ಐಐಟಿಯಲ್ಲಿ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ  ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ 10 ದಿನದಲ್ಲಿ ಲಾಭದಾಯಕ ಉದ್ಯೋಗಾವಕಾಶ ದೊರೆತಿದೆ.

ಮೊದಲ ಹಂತದಲ್ಲೇ ಇಷ್ಟು ಬೃಹತ್ ಸಂಖ್ಯೆಯಲ್ಲಿ ಉದ್ಯೋಗಾವಕಾಶ ದೊರೆತಿರುವುದು ದಾಖಲೆ ಎನ್ನಲಾಗಿದೆ.

ಡಿಸೆಂಬರ್ ಒಂದರಿಂದ ಖರಗ್‌ಪುರ ಐಐಟಿಯಲ್ಲಿ ಸಂದರ್ಶನ ಆರಂಭವಾಗಿದ್ದು, ಇದುವರೆಗೆ ಸುಮಾರು 1,100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್‌ ಮತ್ತು ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಉದ್ಯೋಗಾವಕಾಶ ದೊರೆತಿದೆ.

‘ಕಳದೆ ವರ್ಷ 20 ದಿನಗಳಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆತಿತ್ತು. ಆದರೆ, ಈ ಬಾರಿ ಕೇವಲ 10 ದಿನಗಳಲ್ಲೇ ನಾವು ಹಿಂದಿನ ವರ್ಷದ ದಾಖಲೆ ಮುರಿದಿದ್ದೇವೆ’ ಎಂದು ಐಐಟಿಯ ತಾಂತ್ರಿಕ ವಿದ್ಯಾರ್ಥಿಗಳ ಸಂಘ (ಜಿಮ್ಖಾನಾ) ಉಪಾಧ್ಯಕ್ಷ ಅಟಲ್‌ ಅಶುತೋಷ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ‘ಗೂಗಲ್‌’ನಲ್ಲಿ ಇಂಟರ್ನ್‌ಷಿಪ್‌ ಮುಗಿಸಿದ್ದ ಖರಗ್‌ಪುರ ಐಐಟಿ ವಿದ್ಯಾರ್ಥಿಗೆ ವಾರ್ಷಿಕ ₹ 2 ಕೋಟಿ ಪ್ಯಾಕೇಜ್‌ನ ಉದ್ಯೋಗದ ಅವಕಾಶ ಅರಸಿ ಬಂದಿತ್ತು.

ವೇತನದ ವಿವರಗಳನ್ನು ಬಹಿರಂಗ ಪಡಿಸಲು ಖರಗ್‌ಪುರ ಐಐಟಿ ನಿಷೇಧಿಸಿದೆ.

Comments