ನವದೆಹಲಿ

ಶೋಭಾ ಡೇ ಪ್ರಕರಣ ಇತ್ಯರ್ಥ

ಮಹಾರಾಷ್ಟ್ರ ವಿಧಾನಸಭೆಯ ಹಕ್ಕುಚ್ಯುತಿ ನೋಟಿಸ್ ಪ್ರಶ್ನಿಸಿ ಲೇಖಕಿ ಶೋಭಾ ಡೇ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ಯರ್ಥಗೊಳಿಸಿದೆ.

ನವದೆಹಲಿ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆಯ ಹಕ್ಕುಚ್ಯುತಿ ನೋಟಿಸ್ ಪ್ರಶ್ನಿಸಿ ಲೇಖಕಿ ಶೋಭಾ ಡೇ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ಯರ್ಥಗೊಳಿಸಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಪ್ರೈಮ್ ಟೈಮ್’ ವೇಳೆ ಮರಾಠಿ ಸಿನಿಮಾ ಪ್ರದರ್ಶಿಸಬೇಕು ಎಂಬ ಮಹಾರಾಷ್ಟ್ರ ವಿಧಾನಸಭೆಯ ನಿರ್ಣಯವನ್ನು ಆಕ್ಷೇಪಿಸಿ ಲೇಖಕಿ ಶೋಭಾ ಡೇ ಟ್ವೀಟ್ ಮಾಡಿದ್ದರ ವಿರುದ್ಧ ವಿಧಾನಸಭೆ ಸ್ಪೀಕರ್ ಅವರು  ಹಕ್ಕುಚ್ಯುತಿ ನೋಟಿಸ್ ಜಾರಿ ಮಾಡಿದ್ದರು.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಪಿಸಿ ಪಂಥ್ ಅವರನ್ನೊಳಗೊಂಡ ಪೀಠವು ಈ ಪ್ರಕರಣವನ್ನು ಮುಕ್ತಾಯಗೊಳಿಸಿತು.

ಹಕ್ಕುಚ್ಯುತಿ ನೋಟಿಸ್‌ಗೆ ಶೋಭಾ ಡೇ ಅವರು ನೀಡಿರುವ ಉತ್ತರವನ್ನು ಮಹಾರಾಷ್ಟ್ರ ವಿಧಾನಸಭೆ ಒಪ್ಪಿಕೊಂಡಿದ್ದು, ಪ್ರಕರಣ ಮುಂದುವರಿಸುವ ಅಗತ್ಯವಿಲ್ಲ ಎಂದು ಎರಡೂ ಕಡೆ ಒಮ್ಮತಕ್ಕೆ ಬಂದಿದ್ದರಿಂದ ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

‘ಯಾವ ಚಲನಚಿತ್ರಗಳನ್ನು ಎಲ್ಲಿ ನೋಡಬೇಕು ಎಂಬ ನಿರ್ಧಾರವನ್ನು ನಮಗೆ ಬಿಡಿ, ಇದು ಫಡಣವಿಸ್ ಅವರ ದಾದಾಗಿರಿ ಅಲ್ಲದೆ ಬೇರೇನೂ ಅಲ್ಲ’ ಎಂದು ಶೋಭಾ ಡೇ ಟ್ವೀಟ್ ಮಾಡಿದ್ದರು.

Comments