₹25 ಸಾವಿರ ಕೋಟಿ ಪರಿಹಾರ : ಲೋಕಸಭೆಯಲ್ಲಿ ಮಾಹಿತಿ

‘ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಬರ’

ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 207 ಜಿಲ್ಲೆಗಳು ತೀವ್ರ ಬರಗಾಲದಿಂದ ತತ್ತರಿಸಿದ್ದು, ಕೃಷಿ ಚಟುವಟಿಕೆಗಳಿಗೆ ತೊಡಕುಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು.

ನವದೆಹಲಿ (ಐಎಎನ್‌ಎಸ್‌): ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 207 ಜಿಲ್ಲೆಗಳು ತೀವ್ರ ಬರಗಾಲದಿಂದ ತತ್ತರಿಸಿದ್ದು, ಕೃಷಿ ಚಟುವಟಿಕೆಗಳಿಗೆ ತೊಡಕುಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು.

‘ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ,  ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸಗಡ, ಒಡಿಶಾ ಮತ್ತು ಜಾರ್ಖಂಡ್‌ನ 207  ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆಯ ಕೊರತೆಯಿಂದ ಕ್ಷಾಮ ತಲೆದೋರಿದೆ’ ಎಂದು ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಲೋಕಸಭೆಗೆ ತಿಳಿಸಿದರು.

ಒಟ್ಟು 74 ಪ್ರತಿಕ್ರಿಯೆ: ಬರಗಾಲ ಪರಿಸ್ಥಿತಿ ಕುರಿತಂತೆ ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಾಂಗ್ರೆಸ್‌ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಈ ಕುರಿತ ಚರ್ಚೆ ಪ್ರಾರಂಭಿಸಿದರು.

ಬಳಿಕ 33 ಸಂಸದರು ಈ ಕುರಿತು ಮಾತನಾಡಿದರೆ, 41 ಮಂದಿ ಲಿಖಿತ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ದೇಶದ ಎಲ್ಲಾ ರೈತರೂ 2017ರ ವೇಳೆಗೆ ಮಣ್ಣಿನ ಆರೋಗ್ಯ ಕುರಿತ ಕಾರ್ಡುಗಳನ್ನು ಹೊಂದಲಿದ್ದಾರೆ ಎಂದೂ ಸಚಿವರು ಈ ವೇಳೆ ತಿಳಿಸಿದರು.

ಮಳೆಯ ಕೊರತೆಯಿಂದ 190 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಹಾನಿ ಗೊಳಗಾಗಿದೆ. ಬರಪೀಡಿತ ರಾಜ್ಯಗಳು ಕೇಂದ್ರದಿಂದ ₹25 ಸಾವಿರ ಕೋಟಿ ಪರಿಹಾರ ಕೇಳಿವೆ ಎಂದರು.

Comments