ನವದೆಹಲಿ

ಪೊಲೀಸ್ ಇಲಾಖೆ ಮೋದಿ ಕೈಗೊಂಬೆ: ಎಎಪಿ

ಕೇಂದ್ರದ ಬಿಜೆಪಿ ಸರ್ಕಾರವು ದೆಹಲಿ ಸರ್ಕಾರದ ಮೇಲೆ ರಾಜಕೀಯ ಹಗೆ ಸಾಧಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

ನವದೆಹಲಿ(ಪಿಟಿಐ): ಕೇಂದ್ರದ ಬಿಜೆಪಿ ಸರ್ಕಾರವು ದೆಹಲಿ ಸರ್ಕಾರದ ಮೇಲೆ ರಾಜಕೀಯ ಹಗೆ ಸಾಧಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ. 

ಕೇಂದ್ರ ಸರ್ಕಾರವು ದೆಹಲಿ ಪೊಲೀಸ್ ಇಲಾಖೆ ಸೇರಿದಂತೆ  ಹಲವು ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ದೆಹಲಿ ಪೊಲೀಸರು ಎಎಪಿ ಶಾಸಕರು ಹಾಗೂ ಸ್ವಯಂಸೇವಕರ ವಿರುದ್ಧ ಹಾಕಿದ್ದ ಹಲವು ಸುಳ್ಳು ಪ್ರಕರಣಗಳು  ನ್ಯಾಯಾಲಯದಲ್ಲಿ ಸೋತಿವೆ ಎಂದು ಎಎಪಿ ಸಂಚಾಲಕ ದಿಲೀಪ್ ಪಾಂಡೆ ಹೇಳಿದ್ದಾರೆ.

ದೆಹಲಿ ಪೊಲೀಸರು ಪ್ರಧಾನಿ ಮೋದಿ ಅವರ ಕೈಗೊಂಬೆಯಂತೆ  ಬಳಕೆಯಾಗುತ್ತಿದ್ದು, ಎಎಪಿ ಜತೆ ನಂಟಿರುವ ಎಲ್ಲರ ಮೇಲೂ ಸುಳ್ಳು ಮೊಕದ್ದಮೆಗಳನ್ನು ಹಾಕಲಾಗುತ್ತಿದೆ. ಎಎಪಿ ಕಾರ್ಯಕರ್ತನಾಗಿರುವುದು ಈ ದೇಶದಲ್ಲಿ ಅತಿದೊಡ್ಡ ಅಪರಾಧವೇ ಎಂದು ಪಾಂಡೆ ಅವರು ಪ್ರಶ್ನಿಸಿದ್ದಾರೆ.

Comments