ನವದೆಹಲಿ

ಆರ್‌ಎಸ್‌ಎಸ್‌ ಐಎಸ್‌ನಂತಲ್ಲ: ಗಡ್ಕರಿ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌)ನಂತಲ್ಲ, ಇದು ದೇಶಭಕ್ತರ ಒಂದು ಗುಂಪು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ(ಪಿಟಿಐ):  ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌)ನಂತಲ್ಲ, ಇದು ದೇಶಭಕ್ತರ ಒಂದು ಗುಂಪು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರವಿಲ್ಲದೆ ನೀರಿನಿಂದ ಹೊರತೆಗೆದ ಮೀನಿನಂತೆ ಕಾಂಗ್ರೆಸ್‌ ಒದ್ದಾಡುತ್ತಿ ಎಂದೂ ಅವರು ಟೀಕಿಸಿದ್ದಾರೆ.

ಪ್ರಧಾನಿ ಮೋದಿಯವರನ್ನು ‘ಖಳನಟ’ನಾಗಿ ಬಿಂಬಿಸಲು ಕಾಂಗ್ರೆಸ್‌  ಯತ್ನಿಸುತ್ತಿದೆ, ಸಭ್ಯತೆಯ ಮಿತಿಯೊಳಗೆ ತಮ್ಮನ್ನು
ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಮಾಜಿ ಅಧ್ಯಕ್ಷ ಕಾಂಗ್ರೆಸ್‌ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದರು.

‘ಭಾರತದಲ್ಲಿ ಬಿಜೆಪಿ ಒಡಕು ಉಂಟು ಮಾಡುವ ರಾಜಕೀಯವನ್ನು ಮಾಡುತ್ತಿದೆ, ಇದಕ್ಕೆ ಉದಾಹರಣೆ ಆರ್‌ಎಸ್‌ಎಸ್‌’ ಎಂದು ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕಾನೂನು ಸಚಿವ  ಅಶ್ವನಿ ಕುಮಾರ್‌ ಬಿಜೆಪಿ ವಿರುದ್ಧ ಆರೋಪಿಸಿದ್ದರು.

‘ಆರ್‌ಎಸ್‌ಎಸ್‌ ಐಎಸ್‌ನಂತೆ ಭಯೋತ್ಪಾದಕ ಸಂಘಟನೆಯೇ? ಪ್ರಧಾನಿಯವರೂ  ಆರ್‌ಎಸ್‌ಎಸ್‌ನ ಪ್ರಚಾರಕರಾಗಿದ್ದರು,  ನಾವು ಆರ್‌ಎಸ್‌ಎಸ್‌ ಕಾರ್ಯಕರ್ತರು ಎನ್ನಲು ಸಮಗೆ ಹೆಮ್ಮೆ ಇದೆ, ಕಾಂಗ್ರೆಸ್‌ ಪಕ್ಷ ಆಡಳಿತವಿಲ್ಲದೆ ನೀರಿನಿಂದ ಹೊರಗೆ ಬಂದ ಮೀನಿನಂತಾಗಿದೆ’ ಎಂದು ವ್ಯಂಗ್ಯವಾಡಿದರು.

‘ಅಜೆಂಡಾ ಆಜ್‌ ತಕ್‌: ವಿಕಾಸ್‌ ಕಾ ಎಕ್ಸ್‌ಪ್ರೆಸ್‌ ವೇ’ ಎಂಬ ಕಾರ್ಯಕ್ರಮದಲ್ಲಿ ಗಡ್ಕರಿ ಮತ್ತು ಅಶ್ವನಿ ಈ  ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

Comments