ನವದೆಹಲಿ

ತುರ್ಕಮೆನಿಸ್ತಾನಕ್ಕೆ ಅನ್ಸಾರಿ ಪ್ರವಾಸ

ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಶುಕ್ರವಾರ ತುರ್ಕ್‌ಮೆನಿಸ್ತಾನಕ್ಕೆ ಮೂರು ದಿನಗಳ ಪ್ರವಾಸ ತೆರಳಿದರು.

ನವದೆಹಲಿ (ಪಿಟಿಐ): ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಶುಕ್ರವಾರ ತುರ್ಕ್‌ಮೆನಿಸ್ತಾನಕ್ಕೆ ಮೂರು ದಿನಗಳ ಪ್ರವಾಸ ತೆರಳಿದರು.

ತುರ್ಕಮೆನಿಸ್ತಾನ–ಅಫ್ಘಾನಿಸ್ತಾನ–ಪಾಕಿಸ್ತಾನ–ಭಾರತದ (ಟಿಎಪಿಐ) ನಡುವಿನ ಅಂದಾಜು ₹ 50 ಸಾವಿರ ಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಪೈಪ್‌ಲೈನ್‌ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಮಧ್ಯ ಏಷ್ಯಾ ರಾಷ್ಟ್ರವಾದ ತುರ್ಕಮೆನಿಸ್ತಾನವು ಶಾಶ್ವತವಾಗಿ ಯುದ್ಧನೀತಿಯನ್ನು ಕೈಬಿಟ್ಟ 20ನೇ ವರ್ಷಾಚರಣೆಯಲ್ಲಿಯೂ ಉಪ ರಾಷ್ಟ್ರಪತಿಯವರು ಭಾಗವಹಿಸಲಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೂ  ಈ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.

ಭಾನುವಾರ ಅನ್ಸಾರಿ ಅವರು ಪ್ರಾಚೀನ ನಗರ ಮೇರಿಗೆ ಭೇಟಿ ನೀಡಿ ಪೈಪ್‌ ಲೈನ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತುರ್ಕಮೆನಿಸ್ತಾನ ರಾಜಧಾನಿಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಅನ್ಸಾರಿ ನಮನ ಸಲ್ಲಿಸುವರು.

Comments