ನವದೆಹಲಿ

ಸಲ್ಮಾನ್ ಅರ್ಜಿ ವಾಪಸ್‌ಗೆ ಸುಪ್ರೀಂಕೋರ್ಟ್ ಅನುಮತಿ

ಅಪಘಾತವೆಸಗಿ ಪರಾರಿಯಾದ ಪ್ರಕರಣದಲ್ಲಿ ನಿರ್ದೋಷಿ ಎಂದು ಬಾಂಬೈ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೆ ನಟ ಸಲ್ಮಾನ್ ಖಾನ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯೊಂದನ್ನು ವಾಪಸ್ ಪಡೆದಿದ್ದಾರೆ.

ನವದೆಹಲಿ (ಪಿಟಿಐ): ಅಪಘಾತವೆಸಗಿ ಪರಾರಿಯಾದ ಪ್ರಕರಣದಲ್ಲಿ ನಿರ್ದೋಷಿ ಎಂದು ಬಾಂಬೈ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೆ ನಟ ಸಲ್ಮಾನ್ ಖಾನ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯೊಂದನ್ನು ವಾಪಸ್ ಪಡೆದಿದ್ದಾರೆ.

ಗಾಯಕ ಮತ್ತು ಸ್ನೇಹಿತ ಕಮಾಲ್ ಖಾನ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಲು ಸೂಕ್ತ ಆದೇಶ ನೀಡಬೇಕು ಎಂದು ಕೋರಿ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರ ಪೀಠವು ಅನುಮತಿ ನೀಡಿದೆ.

ಶಾರುಖ್‌ಗೆ ಖುಷಿ: (ಮುಂಬೈ–ಪಿಟಿಐ) ಅಪಘಾತವೆಸಗಿ ಪರಾರಿಯಾದ ಪ್ರಕರಣದಲ್ಲಿ 13 ವರ್ಷಗಳ ಕಾಲ ಕಾನೂನು ಸಮರ ನಡೆಸಿ ಸ್ನೇಹಿತ ಸಲ್ಮಾನ್ ಖಾನ್ ಜಯ ಸಾಧಿಸಿರುವುದು ತುಂಬಾ ಸಂತಸ ತಂದಿದೆ ಎಂದು ಖ್ಯಾತ ಬಾಲಿವುಡ್ ನಟ ಶಾರುಖ್‌ ಖಾನ್ ಹೇಳಿದ್ದಾರೆ.

ಇದುವರೆಗೆ ನಾನು ಈ ಬಗ್ಗೆ ಸಲ್ಮಾನ್ ಜತೆ ಮಾತನಾಡಿಲ್ಲ. ನಾವು ಬಹಳ ವರ್ಷಗಳಿಂದ ಸ್ನೆಹಿತರು, ಆತನಿಗೆ ಯಾವುದೆ ರೀತಿಯಲ್ಲಿ ಒಳಿತಾದರೂ ನಮಗೆ ಖುಷಿ ಆಗುತ್ತದೆ ಎಂದು ಹೇಳಿರುವ ಶಾರುಖ್‌, ಶೀಘ್ರದಲ್ಲಿಯೇ ಸಲ್ಮಾನ್‌ನನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

Comments