ಪಣಜಿ

ಪರಿಕ್ಕರ್ ಹುಟ್ಟುಹಬ್ಬಕ್ಕೆ ಹಣ ತನಿಖೆಗೆ ಒತ್ತಾಯ

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹುಟ್ಟು ಹಬ್ಬವನ್ನು ಈ ತಿಂಗಳ 13ರಂದು ಅದ್ದೂರಿಯಾಗಿ ಆಚರಿಸಲು ಅಗತ್ಯವಾದ ಹಣವನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್‌ಸಿಪಿ ಒತ್ತಾಯಿಸಿದೆ.

ಪಣಜಿ (ಪಿಟಿಐ): ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹುಟ್ಟು ಹಬ್ಬವನ್ನು ಈ ತಿಂಗಳ 13ರಂದು ಅದ್ದೂರಿಯಾಗಿ ಆಚರಿಸಲು ಅಗತ್ಯವಾದ ಹಣವನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್‌ಸಿಪಿ ಒತ್ತಾಯಿಸಿದೆ.

ಹುಟ್ಟು ಹಬ್ಬದ ಅಚರಣೆಗೆ ಸರ್ಕಾರ  ಯಾವುದೆ ರೀತಿಯ ವೆಚ್ಚ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹೇಳಿದ್ದಾರೆ. ಹುಟ್ಟು ಹಬ್ಬದ ಸಂದರ್ಭದಲ್ಲಿ ಯಾವುದೆ ಜಾಹೀರಾತು ಪ್ರಕಟಿಸಬಾರದು ಮತ್ತು ಪುಷ್‍ಪ ಗುಚ್ಛ ನೀಡಬಾರದು. ಅದೇ ಹಣವನ್ನು ತಮಿಳುನಾಡು ಮಳೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬೇಕು ಎಂದು ಪರಿಕ್ಕರ್ ಮನವಿ ಮಾಡಿದ್ದಾರೆ. ಆದ್ದರಿಂದ ಅದ್ದೂರಿ ಸಮಾರಂಭಕ್ಕೆ ಯಾರು ಖರ್ಚು ಮಾಡುತ್ತಿದ್ದಾರೆ ಎಂದು ಎನ್‌ಸಿಪಿ ಗೋವಾ ವಕ್ತಾರ ಟ್ರಜನೊ ಡೆಮೆಲ್ಲೊ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸ್ಪಷ್ಟನೆ: ಗೋವಾ ಜನತೆ ಮಾಜಿ ಮುಖ್ಯಮಂತ್ರಿ ಪರಿಕ್ಕರ್ ಮೇಲಿನ ಪ್ರೀತಿಯಿಂದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಪಕ್ಷ ಅಥವಾ ಸರ್ಕಾರ ಇದಕ್ಕಾಗಿ ಯಾವುದೆ ರೀತಿಯ ವೆಚ್ಚ ಮಾಡುತ್ತಿಲ್ಲ ಎಂದು ಬಿಜೆಪಿ ಗೋವಾ ಘಟಕದ ಮುಖ್ಯಸ್ಥ ವಿನಯ್ ತೆಂಡೂಲ್ಕರ್ ಸ್ಪಷ್ಟಪಡಿಸಿದ್ದಾರೆ.

Comments