ನವದೆಹಲಿ

ಜಪಾನ್‌ನಲ್ಲೂ ಮೇಕ್‌ ಇನ್‌ ಇಂಡಿಯಾ ಜನಪ್ರಿಯ: ಮೋದಿ

‘ಭಾರತದಲ್ಲೇ ತಯಾರಿಸಿ’ (ಮೇಕ್‌ ಇನ್‌ ಇಂಡಿಯಾ) ಅಭಿಯಾನವು ಜಪಾನ್‌ನಲ್ಲೂ ಭಾರಿ ಜನಪ್ರಿಯತೆ ಗಳಿಸಿದ್ದು,  ಬೃಹತ್‌ ಆಂದೋಲನವಾಗಿ ಬದಲಾಗಿದೆ. ಜಪಾನ್‌ ಈ ಯೋಜನೆಗಾಗಿ ಭಾರತಕ್ಕೆ ಈಗಾಗಲೇ 1200 ಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಆರ್ಥಿಕ ನೆರವು ನೀಡಿದೆ ಎಂದು  ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಹೇಳಿದರು.

ನವದೆಹಲಿ (ಪಿಟಿಐ): ‘ಭಾರತದಲ್ಲೇ ತಯಾರಿಸಿ’ (ಮೇಕ್‌ ಇನ್‌ ಇಂಡಿಯಾ) ಅಭಿಯಾನವು ಜಪಾನ್‌ನಲ್ಲೂ ಭಾರಿ ಜನಪ್ರಿಯತೆ ಗಳಿಸಿದ್ದು,  ಬೃಹತ್‌ ಆಂದೋಲನವಾಗಿ ಬದಲಾಗಿದೆ. ಜಪಾನ್‌ ಈ ಯೋಜನೆಗಾಗಿ ಭಾರತಕ್ಕೆ ಈಗಾಗಲೇ 1200 ಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಆರ್ಥಿಕ ನೆರವು ನೀಡಿದೆ ಎಂದು  ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಹೇಳಿದರು.

ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಹಂತ, ಹಂತವಾಗಿ ಮೂಲಸೌಕರ್ಯ ಯೋಜನೆ, ಸ್ಮಾರ್ಟ್‌ ಸಿಟಿ ಅಭಿವೃದ್ಧಿಗಾಗಿ ಒಟ್ಟು 3500 ಕೋಟಿ ಕೋಟಿ ಡಾಲರ್‌ಗಳಷ್ಟು ಆರ್ಥಿಕ ನೆರವು ನೀಡುವುದಾಗಿ ಜಪಾನ್‌ ಘೋಷಿಸಿದೆ. ಇದು ಉಭಯ ದೇಶಗಳು ಹೇಗೆ ಜತೆಯಾಗಿ ಹೆಜ್ಜೆ ಇರಿಸುತ್ತಿದೆ ಎನ್ನುವುದಕ್ಕೆ ಉದಾಹರಣೆ ಎಂದು ಮೋದಿ ಇಲ್ಲಿ ನಡೆದ  ಭಾರತ–ಜಪಾನ್‌ ಉದ್ಯಮಿಗಳ ಸಭೆಯಲ್ಲಿ ಹೇಳಿದರು.

ಮೊದಲ ಬಾರಿ ಜಪಾನ್‌ ಭಾರತದಿಂದ ಕಾರು ಆಮದು ಮಾಡಿಕೊಳ್ಳುತ್ತಿದೆ. ಜಪಾನಿನ ಮಾರುತಿ ಸುಜುಕಿ ಕಂಪೆನಿ ಭಾರತದಲ್ಲೇ ಕಾರು ತಯಾರಿಕಾ ಘಟಕ ಹೊಂದಿದ್ದು, ಇಲ್ಲಿ ತಯಾರಿಸಿದ ಕಾರುಗಳನ್ನು ಜಪಾನ್‌ಗೆ ರಫ್ತು ಮಾಡುತ್ತದೆ ಎಂದರು.  ಕೇವಲ ವೇಗದ ರೈಲು ಯೋಜನೆಗೆ ಮಾತ್ರ ಭಾರತ–ಜಪಾನ್‌ ಕೈಜೋಡಿಸಿಲ್ಲ, ವೇಗದ ಆರ್ಥಿಕ ವೃದ್ಧಿಗೂ ಉಭಯ ದೇಶಗಳು ಬದ್ಧವಾಗಿವೆ ಎಂದರು.

Comments