ಮುಂಬೈ–ಅಹಮದಾಬಾದ್‌ ನಡುವೆ ಬುಲೆಟ್‌ ರೈಲು ಮಾರ್ಗ

ಭಾರತ–ಜಪಾನ್‌ 4 ಪ್ರಮುಖ ಒಪ್ಪಂದಗಳಿಗೆ ಸಹಿ

ಮುಂಬೈ ಮತ್ತು ಅಹಮದಾಬಾದ್‌ ನಡುವೆ ₹98 ಸಾವಿರ ಕೋಟಿ ಹೂಡಿಕೆಯಲ್ಲಿ ಬುಲೆಟ್‌ ರೈಲು ಮಾರ್ಗ ನಿರ್ಮಾಣ,  ನಾಗರಿಕ ಪರಮಾಣ ಇಂಧನ ಅಭಿವೃದ್ಧಿ, ರಕ್ಷಣಾ ತಂತ್ರಜ್ಞಾನ ಸಹಕಾರ ಸೇರಿದಂತೆ ಭಾರತ ಮತ್ತು ಜಪಾನ್‌ ಶನಿವಾರ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.

ನವದೆಹಲಿ (ಪಿಟಿಐ): ಮುಂಬೈ ಮತ್ತು ಅಹಮದಾಬಾದ್‌ ನಡುವೆ ₹98 ಸಾವಿರ ಕೋಟಿ ಹೂಡಿಕೆಯಲ್ಲಿ ಬುಲೆಟ್‌ ರೈಲು ಮಾರ್ಗ ನಿರ್ಮಾಣ,  ನಾಗರಿಕ ಪರಮಾಣ ಇಂಧನ ಅಭಿವೃದ್ಧಿ, ರಕ್ಷಣಾ ತಂತ್ರಜ್ಞಾನ ಸಹಕಾರ ಸೇರಿದಂತೆ ಭಾರತ ಮತ್ತು ಜಪಾನ್‌ ಶನಿವಾರ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.

ಬುಲೆಟ್‌ ರೈಲು ಮಾರ್ಗ ಅಭಿವೃದ್ಧಿಗೆ  ಶೇ 81ರಷ್ಟು ಹಣವನ್ನು ಸಾಲದ ರೂಪದಲ್ಲಿ ಜಪಾನ್‌ ನೀಡಲಿದೆ.  2017ರಲ್ಲಿ ಯೋಜನೆ ಪ್ರಾರಂಭವಾಗಲಿದ್ದು, 2023ರಲ್ಲಿ ಮುಗಿಯುವ ಅಂದಾಜಿದೆ. ಯೋಜನೆ ಪೂರ್ಣಗೊಂಡ ನಂತರ ಬುಲೆಟ್‌ ರೈಲು ಅಹಮದಾಬಾದ್‌ –ಮುಂಬೈ ನಡುವಿನ 505 ಕಿ.ಮೀ  ದೂರವನ್ನು ಕೇವಲ 3 ಗಂಟೆಯಲ್ಲಿ ಕ್ರಮಿಸಲಿದೆ.  ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಇಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ವಿವರಿಸಿದರು.

ಭಾರತದ ಆರ್ಥಿಕ ಕನಸುಗಳನ್ನು ಸಕಾರಗೊಳಿಸುವಲ್ಲಿ ಜಪಾನ್‌ ಪ್ರಮುಖ ಪಾತ್ರ ವಹಿಸಲಿದೆ. ಅಬೆ, ವೈಯಕ್ತಿಕವಾಗಿ ನನಗೆ ಆತ್ಮೀಯ ಸ್ನೇಹಿತ, ಅಷ್ಟೇ ಅಲ್ಲ, ಅವರು ಭಾರತ–ಜಪಾನ್‌ ಪಾಲುದಾರಿಕೆಯ ಚಾಂಪಿಯನ್‌ ಕೂಡ ಎಂದು ಮೋದಿ ಬಣ್ಣಿಸಿದರು. ನಾಗರಿಕ ಪರಮಾಣ ಇಂಧನ ಅಭಿವೃದ್ಧಿಯು ವಾಣಿಜ್ಯ ಉದ್ದೇಶಕ್ಕೆ ಅಲ್ಲ, ಸಂಪೂರ್ಣ ವಿದ್ಯುತ್‌ಗಾಗಿ ಮಾತ್ರ ಎಂದರು.

ಎರಡೂ ದೇಶಗಳ ನಡುವೆ ಮಾಡಿಕೊಂಡಿರುವ ಒಪ್ಪಂದಗಳಿಗೆ ಸಂಬಂಧಿಸಿದಂತೆ ಉಭಯ ನಾಯಕರು ಭಾರತ–ಜಪಾನ್‌ ದೂರದೃಷ್ಟಿ 2025 ಬಿಡುಗಡೆ ಮಾಡಿದರು.

ಭಾರತ–ಜಪಾನ್‌ ಬಾಂಧವ್ಯದ ಭಾಗವಾಗಿ 2016ರ ಮಾರ್ಚ್‌1ರಿಂದ  ಎಲ್ಲ ಜಪಾನ್‌ ನಾಗರಿಕರಿಗೆ ಆಗಮನ ವೀಸಾ (ವೀಸಾ ಆನ್‌ ಅರೈವಲ್‌) ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಮೋದಿ ಹೇಳಿದರು.

Comments