ಪುಣೆ

ರೈತ ಚಳವಳಿ ನೇತಾರ ಶರದ್ ಜೋಶಿ ನಿಧನ

ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡಲು ಒತ್ತಾಯಿಸಿದ ಚಳವಳಿ ಸೇರಿದಂತೆ ಅನೇಕ ರೈತಪರ ಹೋರಾಟಗಳ ನೇತೃತ್ವ ವಹಿಸಿದ್ದ ಹಿರಿಯ ಮುಖಂಡ ಶರದ್ ಜೋಶಿ (81) ಶನಿವಾರ ಇಲ್ಲಿ ನಿಧನ ಹೊಂದಿದರು.

ಪುಣೆ (ಪಿಟಿಐ): ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡಲು ಒತ್ತಾಯಿಸಿದ ಚಳವಳಿ ಸೇರಿದಂತೆ ಅನೇಕ ರೈತಪರ ಹೋರಾಟಗಳ ನೇತೃತ್ವ ವಹಿಸಿದ್ದ ಹಿರಿಯ ಮುಖಂಡ ಶರದ್ ಜೋಶಿ (81) ಶನಿವಾರ ಇಲ್ಲಿ ನಿಧನ ಹೊಂದಿದರು.

ಜೋಶಿ ಅವರು ಕಳೆದ ಕೆಲವು ದಿನಗಳಿಂದ ವೃದ್ಧಾಪ್ಯ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ವ್ಯಾಪಕ ಅಧ್ಯಯನ ಮಾಡಿದ್ದ ಜೋಶಿ ಅವರು 2004ರಿಂದ 2010ರ ವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಅವರು ಸಂಸತ್ತಿನ 16 ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

1958ರಿಂದ 68ರ ವರೆಗೆ ಜೋಶಿ ಅವರು ಅಂಚೆ ಇಲಾಖೆಯಲ್ಲಿ ಹಂಗಾಮಿ ನೌಕರರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಅಂಚೆ ಇಲಾಖೆಯಲ್ಲಿ ಪಿನ್‌ಕೋಡ್ ವ್ಯವಸ್ಥೆಗೆ ನಾಂದಿ ಹಾಡಿದ್ದರಿಂದ ಅಂಚೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟಾಯಿತು.

ನಂತರ ಅವರು ಸ್ವಿಜರ್‌ಲ್ಯಾಂಡ್‌ನಲ್ಲಿ ಇಂಟರ್‌ನ್ಯಾಷನಲ್ ಬ್ಯೂರೊ ಆಫ್ ಯುನಿವರ್ಸಲ್ ಪೋಸ್ಟಲ್ ಯುನಿಯನ್‌ನಲ್ಲಿ ಉನ್ನತ ಸ್ಥಾನದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ 1977ರಲ್ಲಿ ರೈತ ಚಳವಳಿಯ ಮುಖಂಡತ್ವ ವಹಿಸಿಕೊಳ್ಳಲು ಲಾಭದಾಯಕ ಹುದ್ದೆಯನ್ನು ತೊರೆದು ದೇಶಕ್ಕೆ ಮರಳಿದರು.

ಅಸಂಘಟಿತ ರೈತರ ಕಲ್ಯಾಣಕ್ಕಾಗಿ ಅವರು 1979ರಲ್ಲಿ ಶೇತ್ಕರಿ ಸಂಘಟ ನೆಯನ್ನು ಸ್ಥಾಪಿಸಿದರು.

Comments