ನವದೆಹಲಿ

ದಿಲೀಪ್‌ ಕುಮಾರ್‌ಗೆ ಪದ್ಮ ವಿಭೂಷಣ ಇಂದು

ಭಾರತೀಯ ಚಿತ್ರರಂಗದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರಿಗೆ ಮುಂಬೈನಲ್ಲಿ ಭಾನುವಾರ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ  ಪ್ರದಾನ ಮಾಡಲಾಗುವುದು.

ನವದೆಹಲಿ(ಪಿಟಿಐ): ಭಾರತೀಯ ಚಿತ್ರರಂಗದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರಿಗೆ ಮುಂಬೈನಲ್ಲಿ ಭಾನುವಾರ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ  ಪ್ರದಾನ ಮಾಡಲಾಗುವುದು.

ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು 93 ವರ್ಷದ ದಿಲೀಪ್‌ ಕುಮಾರ್‌ ಅವರ ಮುಂಬೈನ ನಿವಾಸದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದರು.

ರಾಷ್ಟ್ರಪತಿ ಭವನದಲ್ಲಿ ಏಪ್ರಿಲ್‌ನಲ್ಲಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಹಿರಿಯ ನಟ ಭಾಗವಹಿಸಿರಲಿಲ್ಲ, ಇತರ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಿದ್ದರು.

Comments