ನ್ಯಾಷನಲ್ ಹೆರಾಲ್ಡ್ ಪ್ರಕರಣ: ಅಪಪ್ರಚಾರ

ಜಿಎಸ್‌ಟಿಗೆ ಕಾಂಗ್ರೆಸ್‌ ವಿರೋಧವಿಲ್ಲ

ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರಕ್ಕೆ (ಜಿಎಸ್‌ಟಿ) ಅಡ್ಡಿಪಡಿಸುವ ಉದ್ದೇಶದಿಂದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ನೆಪ ಮಾಡಿಕೊಂಡು ಕಲಾಪಕ್ಕೆ ಕಾಂಗ್ರೆಸ್ ಅಡ್ಡಿ ಉಂಟು ಮಾಡುತ್ತಿದೆ ಎಂಬ ಆಪಾದನೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಳ್ಳಿ ಹಾಕಿದ್ದಾರೆ.

ಗುವಾಹಟಿ:  ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರಕ್ಕೆ (ಜಿಎಸ್‌ಟಿ) ಅಡ್ಡಿಪಡಿಸುವ ಉದ್ದೇಶದಿಂದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ನೆಪ ಮಾಡಿಕೊಂಡು ಕಲಾಪಕ್ಕೆ ಕಾಂಗ್ರೆಸ್ ಅಡ್ಡಿ ಉಂಟು ಮಾಡುತ್ತಿದೆ ಎಂಬ ಆಪಾದನೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಳ್ಳಿ ಹಾಕಿದ್ದಾರೆ.

ತಮ್ಮ ಪಕ್ಷ ಎತ್ತಿರುವ ಮೂರು ವಿಚಾರಗಳನ್ನು ಬಗೆ ಹರಿಸಿದರೆ ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರಕ್ಕೆ ಸಹಕರಿಸಲಅಗುತ್ತದೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿ ಸಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೂ ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರಕ್ಕೂ ತಳಕು ಹಾಕಿ ಮಾಧ್ಯ ಮದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈ ಎರಡೂ ವಿಚಾರಗಳು ಬೇರೆಬೇರೆ ಎಂದು ರಾಹುಲ್ ಸ್ಪಷ್ಟಪಡಿಸಿದರು.

ಜೇಟ್ಲಿ ಕುತಂತ್ರ:  ಸಿಬಲ್‌ ಆರೋಪ
ನವದೆಹಲಿ (ಪಿಟಿಐ):
ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ತನ್ನ ಕಕ್ಷಿದಾರರಿಗೆ ಆದಾಯ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿಸುವ ಹುನ್ನಾರದೊಂದಿಗೆ  ಹಣಕಾಸು ಸಚಿವ ಅರುಣ್‌ ಜೇಟ್ಲಿ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್‌ ಸಿಬಲ್‌ ಶನಿವಾರ ಇಲ್ಲಿ ಆರೋಪಿಸಿದ್ದಾರೆ.

ಹೆರಾಲ್ಡ್‌ ಪ್ರಕರಣದಲ್ಲಿ ತಮ್ಮ ಪಕ್ಷದಿಂದ ಯಾವುದೇ ಬಗೆಯ ಹಣ ದುರುಪಯೋಗ ನಡೆದಿಲ್ಲ ಎಂದೂ  ಸಿಬಲ್‌, ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ಆದಾಯ ತೆರಿಗೆ ಕಾಯ್ದೆಯ ಅನ್ವಯ ಇದು ಅಪರಾಧ’ ಎಂದು ನಿಮ್ಮ ಹಣಕಾಸು ಸಚಿವರು ತಮ್ಮ ಫೇಸ್‌ಬುಕ್‌ ಖಾತೆ ಹಾಗೂ ಬ್ಲಾಗ್‌ನಲ್ಲಿ ಹೇಳಿದ್ದಾರೆ.

ಈ ದೇಶದ ಹಣಕಾಸು ಸಚಿವರಾದವರಿಗೆ ಈ ರೀತಿಯ ಹೇಳಿಕೆ ನೀಡಲು ಅವಕಾಶವಿದೆಯೇ? ಅವರ ಈ
ನಡೆ, ತಮ್ಮ ಕಕ್ಷಿದಾರರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ಜಾರಿ ಮಾಡಬಹುದು ಎಂದು ಜೇಟ್ಲಿ ಅವರು ಆದಾಯ ತೆರಿಗೆಇಲಾಖೆಗೆ ಸಂದೇಶ ರವಾನಿಸುತ್ತಿದ್ದಾರೆ’ ಎಂದು ಸಿಬಲ್‌ ಆರೋಪಿಸಿದರು.

Comments