ಒಡಿಶಾದ ಪುರಿ ಸರಣಿ ರೈಲು ಅಗ್ನಿ ದುರಂತ

ಆರೋಪಿಗೆ ಉಗ್ರರ ಸಂಪರ್ಕ ಬಯಲು

ಒಡಿಶಾದ ದೇಗುಲ ನಗರಿ ಪುರಿಯಲ್ಲಿ  ಕಳೆದ ತಿಂಗಳು ಸಂಭವಿಸಿದ ಸರಣಿ ರೈಲು ಅಗ್ನಿ ದುರಂತದ ಆರೋಪಿ ರಾಮಚಂದ್ರನ್‌ ಸುಭಾಷ್‌  ಪಾಕಿಸ್ತಾನ ಮೂಲದ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಅಂಶ ಶನಿವಾರ ಇಲ್ಲಿ ನಡೆದ ಬೆರಳಚ್ಚು ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ಭುವನೇಶ್ವರ:  ಒಡಿಶಾದ ದೇಗುಲ ನಗರಿ ಪುರಿಯಲ್ಲಿ  ಕಳೆದ ತಿಂಗಳು ಸಂಭವಿಸಿದ ಸರಣಿ ರೈಲು ಅಗ್ನಿ ದುರಂತದ ಆರೋಪಿ ರಾಮಚಂದ್ರನ್‌ ಸುಭಾಷ್‌  ಪಾಕಿಸ್ತಾನ ಮೂಲದ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಅಂಶ ಶನಿವಾರ ಇಲ್ಲಿ ನಡೆದ ಬೆರಳಚ್ಚು ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ನವೆಂಬರ್‌ 12ರಂದು ಪುರಿಯಲ್ಲಿ ಎಕ್ಸ್‌ಪ್ರೆಸ್‌ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ತಮಿಳುನಾಡು ಮೂಲದ ಸುಭಾಷ್‌ನನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಹಾಗೂ ಸ್ಥಳೀಯ ಪೊಲೀಸರು ಬಂಧಿಸಿದ್ದರು.

ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರಲಿಲ್ಲ. ಆದರೆ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸಲಾಗಿತ್ತು. ಸುಭಾಷ್‌ ಈ ಹಿಂದೆ ಪಶ್ಚಿಮ ಬಂಗಾಲದ ಖರಗ್‌ಪುರ ಹಾಗೂ ಉತ್ತರಾಖಂಡದ ಹರಿದ್ವಾರದಲ್ಲಿಯೂ ಇದೇ ಮಾದರಿಯ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಎಂಬುದು ಎನ್ಐಎ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿತ್ತು.

ಅಲ್ಲದೆ, ಮುಂಬೈಯ ಉಗ್ರ ರಿಯಾಜ್‌ ಎಂಬಾತನೊಂದಿಗೆ ಸುಭಾಷ್‌ ನಿರಂತರ ಸಂಪರ್ಕದಲ್ಲಿದ್ದುದು ಹಾಗೂ ಈ ಹಿಂದೆ  ಮುಂಬೈನಲ್ಲಿ ಕೆಲಸದಲ್ಲಿದ್ದಾಗ ರಿಯಾಜ್‌ನಿಂದ ಹಣ ಪಡೆಯುತ್ತಿದ್ದ ಎಂಬ ಅಂಶವೂ ಬಯಲಾಗಿದೆ. ಹಾಗೆ ಪಡೆದ ಹಣವನ್ನು ಆತ ತನ್ನ ಗೆಳತಿಗೆ ನೀಡುತ್ತಿದ್ದ ಎನ್ನಲಾಗಿದೆ.

ಬೆರಳಚ್ಚು ಪರೀಕ್ಷೆಯ ವರದಿಯನ್ನು ಎನ್ಐಎ ಹಾಗೂ ಜಿಆರ್‌ಪಿಗೆ ನೀಡಲಾಗಿದೆ.

Comments