ವಿಜಯವಾಡ

ಎಡಪಂಥೀಯ ಉಗ್ರವಾದ ದೇಶಕ್ಕೆ ಸವಾಲು:ರಾಜನಾಥ್‌

ಎಡ ಪಂಥೀಯ ಉಗ್ರವಾದವು ದೇಶಕ್ಕೆ ದೊಡ್ಡ ಸವಾಲಾಗಿದ್ದು, ರಾಜ್ಯಗಳ ಸಹಕಾರ ದೊಂದಿಗೆ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

ವಿಜಯವಾಡ (ಐಎನ್ಎಸ್): ಎಡ ಪಂಥೀಯ ಉಗ್ರವಾದವು ದೇಶಕ್ಕೆ ದೊಡ್ಡ ಸವಾಲಾಗಿದ್ದು, ರಾಜ್ಯಗಳ ಸಹಕಾರ ದೊಂದಿಗೆ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

26ನೇ ಪ್ರಾದೇಶಿಕ ಮಂಡಳಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ರಾಜ್ಯಗಳ ಕಡಲ ತೀರಗಳ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸಹಕಾರ ಒಕ್ಕೂಟ ವ್ಯವಸ್ಥೆಯ ಮೂಲಕ ದೇಶದ ಪ್ರಗತಿ ಸಾಧಿಸಲು ಪ್ರಾದೇಶಕ ಮಂಡಳಿಯಂತಹ
ವೇದಿಕೆ ತುಂಬಾ ಸಹಕಾರಿ ಆಗಲಿದೆ ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು.

ಪ್ರಾದೇಶಿಕ ಮಂಡಳಿ ಮತ್ತು ಅಂತರ ರಾಜ್ಯ ಮಂಡಳಿಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿದೆ. ಈ ಸಂಸ್ಥೆಗಳ ಮೂಲಕ ಕೇಂದ್ರ–ರಾಜ್ಯಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.

ಈ ಮಾಸಾಂತ್ಯದ ಒಳಗೆ ಎಲ್ಲಾ ಪ್ರಾದೇಶಿಕ ಮಂಡಳಿಗಳ ಸಭೆ ನಡೆಸಲಾಗುತ್ತದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಅಂತರ ರಾಜ್ಯ ಮಂಡಳಿಗಳ ಪುನರ್‌ರಚನೆ ಕಾರ್ಯ ಮುಗಿದಿದೆ. ಶೀಘ್ರದಲ್ಲಿ ಸಭೆ ಕರೆಯಲಾಗುತ್ತದೆ ಎಂದು ರಾಜನಾಥ್ ಸಿಂಗ್
ತಿಳಿಸಿದರು.

ಕೂಡಂಕುಳಂ ಅಣು ಸ್ಥಾವರ ಪುನರಾರಂಭ: ಜಯಾ ಮನವಿ
ಚೆನ್ನೈ(ಪಿಟಿಐ): 
ತಾಂತ್ರಿಕ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ತಮಿಳುನಾಡಿನಲ್ಲಿರುವ ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕದಲ್ಲಿ ಉತ್ಪಾದನೆಯನ್ನು ಪುನರಾರಂಭಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಜಯಲಲಿತಾ ಆಗ್ರಹಿಸಿದ್ದಾರೆ.

ಇದರ ಜೊತೆ ದಕ್ಷಿಣದ ರಾಜ್ಯಗಳ ಸಹಕಾರದೊಂದಿಗೆ ನಕ್ಸಲರಂತಹ ತೀವ್ರವಾದಿಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕು ಎಂದೂ ಅವರು
ಒತ್ತಾಯಿಸಿದ್ದಾರೆ.

ವಿಜಯವಾಡದಲ್ಲಿ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಜಯಲಲಿತಾ ಮಾತನಾಡಿದರು.
ಕೂಡಂಕುಳಂ ಅಣುಸ್ಥಾವರವು ಡಿಸೆಂಬರ್ 31ರಂದು ವಾಣಿಜ್ಯೋದ್ದೇಶದ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಆದರೆ ಜೂನ್ 24ರಂದು ಸ್ಥಗಿತಗೊಂಡಿತ್ತು. ಭಾರತೀಯ ಅಣುಶಕ್ತಿ ಆಯೋಗವು ಘಟಕ ಪುನರಾರಂಭದ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ ಎಂದು ಜಯಲಲಿತಾ ಹೇಳಿದ್ದಾರೆ. ತಮಿಳುನಾಡಿಗೆ ಕೂಡಂಕುಳ ಅಣುವಿದ್ಯುತ್ ಸ್ಥಾವರದಿಂದ 1 ಸಾವಿರ ಮೆಗಾವ್ಯಾಟ್ ಪೈಕಿ 563 ಮೆಗಾವ್ಯಾಟ್ ವಿದ್ಯುತ್ ನಿಗದಿಯಾಗಿದೆ.

Comments