₹83 ಸಾವಿರ ಕೋಟಿ ನಿಧಿ ಸ್ಥಾಪಿಸಲು ನಿರ್ಧಾರ

ಮೇಕ್ ಇನ್ ಇಂಡಿಯಾಗೆ ಜಪಾನ್‌ ಬೆಂಬಲ

‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಮಹತ್ವದ ಪಾಲುದಾರಿಕೆ ಹೊಂದಲು ಬಯಸಿರುವ ಜಪಾನ್‌, ಅದಕ್ಕಾಗಿ ₹83 ಸಾವಿರ ಕೋಟಿ ನಿಧಿ ಸ್ಥಾಪಿಸಲು ನಿರ್ಧರಿಸಿದೆ.

ನವದೆಹಲಿ (ಪಿಟಿಐ):  ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಮಹತ್ವದ ಪಾಲುದಾರಿಕೆ ಹೊಂದಲು ಬಯಸಿರುವ ಜಪಾನ್‌, ಅದಕ್ಕಾಗಿ ₹83 ಸಾವಿರ ಕೋಟಿ ನಿಧಿ ಸ್ಥಾಪಿಸಲು ನಿರ್ಧರಿಸಿದೆ.

‘ಜಪಾನ್ ಕೈಗಾರಿಕಾ ಟೌನ್‌ಷಿಪ್‌’ನಲ್ಲಿ ಹೂಡಿಕೆಯನ್ನು ಆಕರ್ಷಿಸಲು ವಿಶೇಷ ಸವಲತ್ತುಗಳನ್ನು ಒದಗಿಸುವುದಾಗಿ ಭಾರತ ಭರವಸೆ ನೀಡಿದೆ.

ಜಪಾನ್ ಬ್ಯಾಂಕ್‌ ಫಾರ್ ಇಂಟರ್‌ನ್ಯಾಷನಲ್‌ ಕೋ ಆಪರೇಷನ್‌ ಮತ್ತು ನಿಪ್ಪನ್ ಎಕ್ಸ್‌ಪೋರ್ಟ್‌ಗಳ ₹83 ಸಾವಿರ ಕೋಟಿವರೆಗಿನ ‘ಜಪಾನ್–ಇಂಡಿಯಾ ಮೇಕ್ ಇನ್ ಇಂಡಿಯಾ ವಿಶೇಷ ಹಣಕಾಸು ಸೌಲಭ್ಯ’ದ ಯೋಜನೆಯನ್ನು ಮೋದಿ ಸ್ವಾಗತಿಸಿದರು.

‘ಮೇಕ್‌ ಇನ್‌ ಇಂಡಿಯಾ’ ಕಾರ್ಯಕ್ರಮ ಜಪಾನ್‌ನಲ್ಲಿ ಕೂಡಾ ಜನಪ್ರಿಯವಾಗಿದೆ ಎಂದೂ ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಮೋದಿ ಮತ್ತು ಅಬೆ ಅವರ ಮಾತುಕತೆಯ ಬಳಿಕ ಈ ಕುರಿತ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಯಿತು.

ರಾಷ್ಟ್ರಪತಿ ಭವನಕ್ಕೆ ಅಬೆ
ನವದೆಹಲಿ (ಪಿಟಿಐ):
ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೊ ಅಬೆ  ಶನಿವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿದರು.

ಅಬೆ ಅವರನ್ನು ಸ್ವಾಗತಿಸಿದ ಪ್ರಣವ್‌ ಮುಖರ್ಜಿ ಅವರು, ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಜಪಾನ್‌, ಭಾರತದ ಅತಿ ಮುಖ್ಯ ಸಹಭಾಗಿ ರಾಷ್ಟ್ರವಾಗಿದೆ ಎಂದರು.

ಭಾರತದ ಈಗಿನ ಅಭಿವೃದ್ಧಿಯ ದರವನ್ನು ಗಮನದಲ್ಲಿಟ್ಟುಕೊಂಡು ಜಪಾನ್‌ನ ಖಾಸಗಿ ವಲಯ ಇಲ್ಲಿನ ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂದರು.

‘ಭಾರತ–ಜಪಾನ್‌ ನಡುವಣ ದ್ವಿಪಕ್ಷೀಯ ಸಂಬಂಧ ಎಲ್ಲಾ ಸರ್ಕಾರಗಳ ನಿರಂತರ ಪ್ರಯತ್ನದ ಫಲವಾಗಿ ಗಟ್ಟಿಗೊಳ್ಳುತ್ತಾ ಬಂದಿದೆ. ಭಾರತ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಸಲು ಉಭಯ ದೇಶಗಳ ಮಧ್ಯೆ ಸಹಕಾರ ಮಹತ್ವದ್ದಾಗಿದೆ’ ಎಂದು ಶಿಂಜೊ ಅಬೆ ಹೇಳಿದರು.

Comments