ಉಗ್ರರ ಹತ್ತಿಕ್ಕಲು ಬಾಂಧವ್ಯ ಮುಖ್ಯ: ಮೆಹಬೂಬಾ

ಪಾಕ್‌ ಜತೆ ಮಾತುಕತೆ ಅನಿವಾರ್ಯ

ಇಸ್ಲಾಮಿಕ್‌ ಸ್ಠೇಟ್‌ (ಐಎಸ್‌) ಮತ್ತು ಅಲ್‌ ಕೈದಾದಂತಹ ಉಗ್ರರ ಸಂಘಟನೆಗಳಿಂದ ವಿಶ್ವದೆಲ್ಲೆಡೆ ಆತಂಕ ಹೆಚ್ಚುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದೆ ಭಾರತಕ್ಕೆ ಪರ್ಯಾಯ ಮಾರ್ಗವಿಲ್ಲ ಎಂದು ಜಮ್ಮು–ಕಾಶ್ಮೀರದಲ್ಲಿ ಬಿಜೆಪಿ ಮಿತ್ರ ಪಕ್ಷವಾದ ಪಿಡಿಪಿ ಶನಿವಾರ ಕಿವಿಮಾತು ಹೇಳಿದೆ.

ನವದೆಹಲಿ (ಇಟಿಐ): ಇಸ್ಲಾಮಿಕ್‌ ಸ್ಠೇಟ್‌ (ಐಎಸ್‌) ಮತ್ತು ಅಲ್‌ ಕೈದಾದಂತಹ ಉಗ್ರರ ಸಂಘಟನೆಗಳಿಂದ ವಿಶ್ವದೆಲ್ಲೆಡೆ ಆತಂಕ ಹೆಚ್ಚುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದೆ ಭಾರತಕ್ಕೆ ಪರ್ಯಾಯ ಮಾರ್ಗವಿಲ್ಲ ಎಂದು ಜಮ್ಮು–ಕಾಶ್ಮೀರದಲ್ಲಿ ಬಿಜೆಪಿ ಮಿತ್ರ ಪಕ್ಷವಾದ ಪಿಡಿಪಿ ಶನಿವಾರ ಕಿವಿಮಾತು ಹೇಳಿದೆ.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಾಶ್ಮೀರದ ವಿಚಾರವಾಗಿ  ಯಾರ ಸಲಹೆಯೂ ತಮಗೆ ಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಭಯೋತ್ಪಾದಕ ಸಂಘಟನೆಗಳನ್ನು ದೂರವಿಡಬೇಕಾದರೆ ಪಾಕಿಸ್ತಾನ, ಆಫ್ಘಾನಿಸ್ತಾನ ಮಾತ್ರವಲ್ಲದೆ ಬಾಂಗ್ಲಾದೇಶದ ಜತೆಗೂ ಭಾರತ ಕೈಜೋಡಿಸಬೇಕು’ ಎಂದು ಪ್ರತಿಪಾದಿಸಿದರು.

’ಜಮ್ಮು ಮತ್ತು ಕಾಶ್ಮೀರ ಇತರ ಯಾವುದೇ ರಾಜ್ಯಗಳಂತಲ್ಲ. ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧವು ನಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ಪಾಕಿಸ್ತಾನದ ಬಗ್ಗೆ ಚರ್ಚೆ ಬಂದಾಗ ನಾವು ಚೌಕಟ್ಟು ಮೀರಿ ಮಾತನಾಡುವುದಿಲ್ಲ. ಆದರೆ ಜನರು  ಅನುಭವದಿಂದ ಕ್ರಮೇಣ ಕಲಿಯುತ್ತಾರೆ’ ಎಂದು ಮೆಹಬೂಬಾ ಮಾರ್ಮಿಕವಾಗಿ ಹೇಳಿದರು.

ಪಾಕಿಸ್ತಾನದ ಜತೆಗಿನ ಮಾತುಕತೆಯನ್ನು ಮುಂದೂಡಬಹುದು ಇಲ್ಲವೇ ತಪ್ಪಿಸಬಹುದು ಆದರೆ ಮಾತನಾಡದೇ ಇರಲು ಸಾಧ್ಯವೇ ಇಲ್ಲ. ಭಯೋತ್ಪಾದನೆಯನ್ನು ಮಟ್ಟ ಹಾಕಬೇಕಾದರೆ ಅ ದೇಶದ ಜತೆಗೆ ಸಂಬಂಧ ಹೊಂದಿರಲೇಬೇಕು ಎಂಬ ವಾಸ್ತವವನ್ನು ಅರಿತುಕೊಂಡೇ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ’ ಎಂದು ಅವರು ವಿಶ್ಲೇಷಿಸಿದರು.

Comments