ತ್ರಿಪುರಾ: ಎಡರಂಗಕ್ಕೆ ಸ್ಪಷ್ಟ ಬಹುಮತ

ಈಶಾನ್ಯ ಭಾರತದ ಅತ್ಯಂತ ಹಳೆಯದಾದ ಅಗರ್ತಲಾ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು ಮಾಣಿಕ್ ಸರ್ಕಾರ್‌ ನೇತೃತ್ವದ ಎಡರಂಗ ಜಯಭೇರಿ ಬಾರಿಸಿದೆ.

ಅಗರ್ತಲಾ (ಐಎಎನ್ಎಸ್‌):  ಈಶಾನ್ಯ ಭಾರತದ ಅತ್ಯಂತ ಹಳೆಯದಾದ ಅಗರ್ತಲಾ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು ಮಾಣಿಕ್ ಸರ್ಕಾರ್‌ ನೇತೃತ್ವದ ಎಡರಂಗ ಜಯಭೇರಿ ಬಾರಿಸಿದೆ.

ಅಗರ್ತಲಾ ಪಾಲಿಕೆಯಲ್ಲಿ ಆಡಳಿತಾರೂಢ ಸಿಪಿಎಂ 40 ಸ್ಥಾನ ಗಳಿಸಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಮರಳಿದ್ದರೆ 12 ಪುರಸಭೆ ಹಾಗೂ 6 ನಗರಸಭೆಗಳಲ್ಲಿಯೂ ಸ್ಪಷ್ಟ ಬಹುಮತ ಗಳಿಸಿದೆ. ಆದರೆ, ಅಂಬಾಸ್ಸಾ ಮಹಾನಗರ ಪಾಲಿಕೆಯಲ್ಲಿ ಮಾತ್ರ ಎಡರಂಕ್ಕೆ ಸೋಲಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್‌ ಅಲ್ಲಿ ಅಧಿಕಾರ ಹಿಡಿದಿದೆ.

Comments