ವಾರಾಣಸಿ

ಗಂಗೆಗೆ ಆರತಿ

ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಶನಿವಾರ ಸಂಜೆ ಇಲ್ಲಿನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಭಾಗವಹಿಸಿದರು.

ವಾರಾಣಸಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಶನಿವಾರ ಸಂಜೆ ಇಲ್ಲಿನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಭಾಗವಹಿಸಿದರು.

ಇಬ್ಬರೂ ಧುರೀಣರು ಶ್ಲೋಕ ಪಠಣ, ಮಂತ್ರೋಚ್ಚಾರಣೆಗಳ ಮಧ್ಯೆ ಗಂಗೆಗೆ ಆರತಿ ಬೆಳಗಿದರು. ಇದರೊಂದಿಗೆ ಎರಡೂ ದೇಶಗಳ ಪಾರಂಪರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಪ್ರಾರಂಭಗೊಂಡಿತು.

ಈ ಭೇಟಿ ಪ್ರಯುಕ್ತ ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು.

ಪ್ರಧಾನಿ ಮೋದಿಯವರು ಲೋಕಸಭೆಯಲ್ಲಿ ವಾರಾಣಸಿಯನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಸಮಾರಂಭಕ್ಕೆ ವಿಶೇಷ ಮೆರುಗು ಬಂದಿತ್ತು. ಇಬ್ಬರೂ ಅಲ್ಲಿ ಸುಮಾರು 45 ನಿಮಿಷ ಇದ್ದರು.

ಸುಮಾರು 7 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿ ಸಲಾಗಿತ್ತು.

Comments