ನವದೆಹಲಿ

ಬೆಂಗಳೂರು ಹೊರವರ್ತುಲ ರಸ್ತೆಗೆ ನೆರವು

ಬೆಂಗಳೂರು ಸುತ್ತ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ  ಅಧಿಕೃತ ಅಭಿವೃದ್ಧಿ ನೆರವು (ಒಡಿಎ) ಯೋಜನೆಯಡಿ ಸಾಲ ನೀಡಲು ತಮ್ಮ ದೇಶ ಸಿದ್ಧ ಎಂದು ಜಪಾನ್‌ ಪ್ರಧಾನಿ ಶಿಂಜೊ ಅಬೆ ಶನಿವಾರ ಇಲ್ಲಿ ತಿಳಿಸಿದರು.

ನವದೆಹಲಿ: ಬೆಂಗಳೂರು ಸುತ್ತ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ  ಅಧಿಕೃತ ಅಭಿವೃದ್ಧಿ ನೆರವು (ಒಡಿಎ) ಯೋಜನೆಯಡಿ ಸಾಲ ನೀಡಲು ತಮ್ಮ ದೇಶ ಸಿದ್ಧ ಎಂದು ಜಪಾನ್‌ ಪ್ರಧಾನಿ ಶಿಂಜೊ ಅಬೆ ಶನಿವಾರ ಇಲ್ಲಿ ತಿಳಿಸಿದರು.

ಇದಲ್ಲದೆ ಒಡಿಎ ಮತ್ತು ಇತರೆ ಮೂಲಸೌಕರ್ಯಗಳನ್ನು ಬಳಸಿಕೊಂಡು ಚೆನ್ನೈ– ಬೆಂಗಳೂರು ಕೈಗಾರಿಕಾ ಕಾರಿಡಾರ್‌(ಸಿಬಿಐಸಿ) ಜಾರಿಗೆ ತರಲಾಗುವುದು. ಇದರಲ್ಲಿ ಜಪಾನ್‌ ಸುಮಾರು ₹ 33 ಸಾವಿರ ಕೋಟಿ ಬಂಡವಾಳ ಹೂಡಲಿದೆ ಎಂದು ಭಾರತ ನಿರೀಕ್ಷಿಸಿದೆ.

Comments