‘ಹವಾಮಾನ ನ್ಯಾಯ’ಕ್ಕೆ ಗೆಲುವು; ಪ್ರಧಾನಿ ಅಭಿಮತ

ಹವಾಮಾನ ಒಪ್ಪಂದ: ಗೆದ್ದವರೂ ಇಲ್ಲ, ಸೋತವರೂ ಇಲ್ಲ –ಮೋದಿ

ತಾಪಮಾನ ಏರಿಕೆ ತಡೆಯುವ ಒಪ್ಪಂದಕ್ಕೆ ಶನಿವಾರ ರಾತ್ರಿ ಪ್ಯಾರಿಸ್‌ನಲ್ಲಿ 196 ರಾಷ್ಟ್ರಗಳು ಸಹಿ ಹಾಕಿರುವುದು ‘ಹವಾಮಾನ ನ್ಯಾಯಕ್ಕೆ ಲಭಿಸಿದ ಗೆಲುವು’ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ನವದೆಹಲಿ (ಪಿಟಿಐ): ತಾಪಮಾನ ಏರಿಕೆ ತಡೆಯುವ ಒಪ್ಪಂದಕ್ಕೆ ಶನಿವಾರ ರಾತ್ರಿ ಪ್ಯಾರಿಸ್‌ನಲ್ಲಿ 196 ರಾಷ್ಟ್ರಗಳು ಸಹಿ ಹಾಕಿರುವುದು ‘ಹವಾಮಾನ ನ್ಯಾಯಕ್ಕೆ ಲಭಿಸಿದ ಗೆಲುವು’ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಪ್ಯಾರಿಸ್‌ ಒಪ್ಪಂದದಲ್ಲಿ ಯಾವುದೇ ದೇಶದ ಸೋಲು–ಗೆಲುವು ಅಡಗಿಲ್ಲ.  ಹವಾಮಾನ ವೈಪರೀತ್ಯ ತಡೆಯುವುದು ನಿಜಕ್ಕೂ ಸವಾಲು. ಆದರೆ, ಈ ಒಪ್ಪಂದದಿಂದ ತಾಪಮಾನ ಏರಿಕೆ ಮಿತಿಯನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ನಿಗದಿಪಡಿಸಲು ಎಲ್ಲಾ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಇದು   ಭವಿಷ್ಯದಲ್ಲಿ ಜಾಗತಿಕ ತಾಪಮಾನ ಏರಿಕೆ ತಡೆಯುವಲ್ಲಿ ಮತ್ತು ಹಸಿರು ಉಳಿಸುವಲ್ಲಿ  ಎಲ್ಲ ದೇಶಗಳಿಗೆ ಪ್ರೇರಣೆಯಾಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ಯಾರಿಸ್‌ ಒಪ್ಪಂದಲ್ಲಿ ಭಾರತದ ಸಲಹೆಗಳಿಗೆ ಮಾನ್ಯತೆ ನೀಡಿರುವುದು ಸಂತಸದ ವಿಚಾರ’ ಎಂದು ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರತಿಕ್ರಿಯಿದ್ದಾರೆ.

ಈ ಒಪ್ಪಂದವು ಭಾರತ ಮತ್ತು ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇನ್ನೂ ಹಲವು ವರ್ಷಗಳ ಕಾಲ ಕಲ್ಲಿದ್ದಲು ಬಳಸಲು ಅವಕಾಶ ನೀಡುತ್ತದೆ.

Comments