ಜೈಪುರ

ಐಎಸ್‌ ಘೋಷಣೆ ನಾಲ್ವರ ಬಂಧನ

ರಾಜಸ್ತಾನದ ಮಾಲ್ಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ರ‍್ಯಾಲಿಯ ವೇಳೆ ಐಎಸ್‌ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಜೈಪುರ (ಪಿಟಿಐ): ರಾಜಸ್ತಾನದ ಮಾಲ್ಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ರ‍್ಯಾಲಿಯ ವೇಳೆ ಐಎಸ್‌ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ‘ಬಂಧಿತರನ್ನು ಫಿರೋಜ್‌, ವಾಸಿಂ, ಮೊಹಮದ್‌ ಫಾಹಿದ್‌ ಹಾಗೂ ವಾಸಿಂ ಅಕ್ರಂ ಎಂದು ಗುರುತಿಸಲಾಗಿದೆ. ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ಗೋಪಿಚಂದ್‌ ತಿಳಿಸಿದ್ದಾರೆ.

‘ವೀಡಿಯೊ ದೃಶ್ಯಗಳ ಆಧಾರದ ಮೇಲೆ ಐಎಸ್‌ ಪರ ಘೋಷಣೆ ಕೂಗಿದ ನಾಲ್ವರು ಆರೋಪಿಗಳನ್ನು ಗುರುತಿಸಲಾಯಿತು. ಮತ್ತೆ ಕೆಲವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ’ ಎಂದಿದರು. ಐಎಸ್‌ ಸಿದ್ಧಾಂತವನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಭಾರತ ತೈಲ ನಿಗಮದ ಮಾರುಕಟ್ಟೆ ವ್ಯವಸ್ಥಾಪಕ ಮೊಹಮದ್‌ ಸಿರಾಜುದ್ದೀನ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

Comments