ಶ್ರೀನಗರ: ಮೈನಸ್‌ 0.8 ಡಿಗ್ರಿ ಸೆಲ್ಸಿಯಸ್‌

ಉತ್ತರ ಭಾರತದಲ್ಲಿ ನಡುಕ

ಉತ್ತರ ಭಾರತದ ಹಲವು ಭಾಗಗಳಲ್ಲಿ ತೀವ್ರ ಶೀತಗಾಳಿ ಬೀಸುತ್ತಿದೆ. ಲಡಾಖ್‌ನ ಲೆಹ್‌ನಲ್ಲಿ ಶನಿವಾರ ರಾತ್ರಿ ಮೈನಸ್‌ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.

ನವದೆಹಲಿ (ಪಿಟಿಐ): ಉತ್ತರ ಭಾರತದ ಹಲವು ಭಾಗಗಳಲ್ಲಿ ತೀವ್ರ ಶೀತಗಾಳಿ ಬೀಸುತ್ತಿದೆ. ಲಡಾಖ್‌ನ ಲೆಹ್‌ನಲ್ಲಿ ಶನಿವಾರ ರಾತ್ರಿ ಮೈನಸ್‌ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಉಂಟಾಗಿದೆ. ದೆಹಲಿಯಲ್ಲಿ ಬೆಳಿಗ್ಗೆ 6.8 ಡಿಗ್ರಿ ಸೆಲ್ಸಿಯಸ್‌ ವಾತಾವರಣವಿತ್ತು. 

ಜಮ್ಮು ಮತ್ತು ಕಾಶ್ಮೀರದ ಲೆಹ್‌ ಪ್ರಸಕ್ತ ಅವಧಿಯ ಅತ್ಯಂತ ಚಳಿಯ ರಾತ್ರಿ ಎದುರಿಸಿತು. ಶುಕ್ರವಾರ ರಾತ್ರಿ ಮೈನಸ್‌ 4.6 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದ ಉಷ್ಣಾಂಶ, ಶನಿವಾರ ಮೈನಸ್‌ 12ಕ್ಕೆ ಕುಸಿದಿತ್ತು. ಶ್ರೀನಗರದಲ್ಲಿ ಮೈನಸ್‌ 0.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಯಿತು.

ಶಿಮ್ಲಾ, ಲಾಹೌಲ್‌, ಸ್ಪಿಟಿ, ಮನಾಲಿ ಮತ್ತು ಕಲ್ಪಾಗಳಲ್ಲಿ ಶೀತಗಾಳಿ ತೀವ್ರವಾಗಿತ್ತು. ಹರಿಯಾಣ ಮತ್ತು ಪಂಜಾಬ್‌ ರಾಜ್ಯಗಳಲ್ಲಿಯೂ ಕನಿಷ್ಠ ತಾಪಮಾನದಲ್ಲಿ  ಭಾರಿ ಕುಸಿತ ಉಂಟಾಗಿದೆ.

Comments