ನವದೆಹಲಿ

ಮಧ್ಯಾಹ್ನದ ಬಿಸಿಯೂಟ ಪರೀಕ್ಷೆಗೆ ಸೂಚನೆ

ಮಧ್ಯಾಹ್ನ ಬಿಸಿಯೂಟವನ್ನು ಪ್ರತಿದಿನ ಕನಿಷ್ಠ ಒಬ್ಬರು ಪೋಷಕರು ರುಚಿ ನೋಡಿದ ನಂತರವೇ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ನವದೆಹಲಿ: ಮಧ್ಯಾಹ್ನ ಬಿಸಿಯೂಟವನ್ನು ಪ್ರತಿದಿನ ಕನಿಷ್ಠ ಒಬ್ಬರು ಪೋಷಕರು ರುಚಿ ನೋಡಿದ ನಂತರವೇ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದೇ ವೇಳೆ ಮಕ್ಕಳಿಗೆ ಪೌಷ್ಟಿಕಾಂಶ ಯುಕ್ತ  ಆಹಾರ ನೀಡಲಾಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಲು ದಾಖಲೆಯೊಂದನ್ನು ಕಾಪಾ ಡಲು ತಿಳಿಸಿದೆ.

ಮಕ್ಕಳಿಗೆ ಬಿಸಿಯೂಟ ನೀಡುವ ಮೊದಲು ಒಬ್ಬರಾದ ನಂತರ ಒಬ್ಬರು ಪೋಷಕರಿಗೆ ರುಚಿ ನೋಡಲು ನೀಡ ಬೇಕು. ಶಾಲೆಯ ಶಿಕ್ಷಕರು ಈ ವೇಳೆ  ಪರೀಕ್ಷೆ ಮಾಡಬೇಕು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಊಟದ ರುಚಿ ನೋಡುವುದು ಮತ್ತು ಶಿಕ್ಷಕರ ಪರಿಶೀಲನೆ ಕಡ್ಡಾಯ ಗೊಳಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ದೇಶದಾದ್ಯಂತ 10.22 ಕೋಟಿಗೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಇದಕ್ಕೂ ಮೊದಲು ಬಿಸಿಯೂಟವನ್ನು ಒಬ್ಬರು ಶಿಕ್ಷಕರೂ ಸೇರಿದಂತೆ ಇಬ್ಬರು ಪರಿಶೀಲನೆ ನಡೆಸಿದ ನಂತರವೇ ಮಕ್ಕಳಿಗೆ ನೀಡಬೇಕು ಎಂದು ಸಚಿವಾಲಯವು ತಿಳಿಸಿತ್ತು. ಇದಾಗಿ 10 ತಿಂಗಳ ನಂತರ ಹೊಸ ಮಾರ್ಗಸೂಚಿಯನ್ನು ತಿಳಿಸಿದೆ.

Comments