ನವದೆಹಲಿ

ಸಂಸದರಿಗೆ ಎಲೆಕ್ಟ್ರಿಕಲ್‌ ಬಸ್‌ ಉಡುಗೊರೆ: ಗಡ್ಕರಿ

ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರಿಗೆ ಎಲೆಕ್ಟ್ರಿಕಲ್‌ ಬಸ್‌ ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನವದೆಹಲಿ (ಪಿಟಿಐ): ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರಿಗೆ ಎಲೆಕ್ಟ್ರಿಕಲ್‌ ಬಸ್‌ ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

‘ಈ ಸಂಬಂಧ ಯೋಜನೆಯೊಂದನ್ನು ರೂಪಿಸಿದ್ದು, ಅಂದುಕೊಂಡಂತೆ ಆದಲ್ಲಿ ಇದೇ ಡಿ. 21ರಂದು ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಎರಡು ಎಲೆಕ್ಟ್ರಿಕಲ್‌ ಬಸ್‌ಗಳನ್ನು ನೀಡಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ಉಪಗ್ರಹಗಳಿಗೆ ಬಳಸುವ ಲಿಥಿಯಂ ಅಯಾನ್‌ ಬ್ಯಾಟರಿ ಸಹಾಯದಿಂದ ಈ ಎಲೆಕ್ಟ್ರಿಕಲ್ ಬಸ್‌ಗಳು ಕಾರ್ಯನಿರ್ವಹಿಸುತ್ತವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳು, ಕೇಂದ್ರ ಸಾರಿಗೆ ಸಚಿವಾಲಯದ ಜತೆಗೂಡಿ ₹ 5 ಲಕ್ಷ ವೆಚ್ಚದಲ್ಲಿ ಬ್ಯಾಟರಿಗಳನ್ನು ತಯಾರಿಸಿದ್ದಾರೆ. ಈ ಯೋಜನೆ ಪ್ರಧಾನಿ ಅವರ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯ ಭಾಗವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಿಕಲ್‌ ಬಸ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವುದು ಮತ್ತು ಈ ಸಂಬಂಧ ಪೇಟೆಂಟ್‌ ಅನ್ನು ನೋಂದಣಿ ಮಾಡಲಾಗುವುದು. ಪ್ರಾಯೋಗಿಕವಾಗಿ ದೆಹಲಿಯ ರಸ್ತೆಗಳಲ್ಲಿ 15 ಎಲೆಕ್ಟ್ರಿಕಲ್‌ ಬಸ್‌ಗಳನ್ನು ಓಡಿಸಲಾಗುವುದು. ನಂತರ ದೇಶದ ಇತರ ಭಾಗಗಳಲ್ಲಿ ಇದನ್ನು ಜಾರಿ ತರಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ಸುಮಾರು 1.5ಲಕ್ಷ ಡಿಸೇಲ್‌ ಬಸ್‌ಗಳನ್ನು ಎಲೆಕ್ಟ್ರಿಕಲ್ ಬಸ್‌ಗಳನ್ನಾಗಿ ಪರಿವರ್ತಿಸಿ ದೇಶದಾದ್ಯಂತ ಈ ಯೋಜನೆ ವಿಸ್ತರಿಸುವ ಯೋಜನೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Comments