ಒಆರ್ಒಪಿ ಜಾರಿಗೊಳಿಸಲು ನಿವೃತ್ತ ಸೈನಿಕರಿಂದ ಒತ್ತಾಯ

ಚಳವಳಿ ತೀವ್ರಗೊಳಿಸುವ ಬೆದರಿಕೆ

ಇನ್ನು ಮೂರು ವಾರಗಳಲ್ಲಿ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ಚಳವಳಿಯನ್ನು  ತೀವ್ರಗೊಳಿಸಲಾಗುತ್ತದೆ ಎಂದು ಒಂದು ಶ್ರೇಣಿ ಒಂದು ಪಿಂಚಣಿಗಾಗಿ (ಒಆರ್‌ಪಿಒ) ಚಳವಳಿ ನಡೆಸುತ್ತಿರುವ ನಿವೃತ್ತ ಯೋದರು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ (ಪಿಟಿಐ): ಇನ್ನು ಮೂರು ವಾರಗಳಲ್ಲಿ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ಚಳವಳಿಯನ್ನು  ತೀವ್ರಗೊಳಿಸಲಾಗುತ್ತದೆ ಎಂದು ಒಂದು ಶ್ರೇಣಿ ಒಂದು ಪಿಂಚಣಿಗಾಗಿ (ಒಆರ್‌ಪಿಒ) ಚಳವಳಿ ನಡೆಸುತ್ತಿರುವ ನಿವೃತ್ತ ಯೋದರು ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾ ವಣೆಯಲ್ಲಿ ಬಿಜೆಪಿಗೆ ಮತ ಹಾಕದಿರಲು ಈಗಾಗಲೇ ನಿರ್ಧರಿಸಿರುವ ನಿವೃತ್ತ ಯೋಧರ ಸಂಯುಕ್ತ ವೇದಿಕೆಯು, ಭೂ ಸೇನೆಯ ಮಾಜಿ ಮುಖ್ಯಸ್ಥ, ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರನ್ನು ಸಂಧಾನಕಾ ರರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದೆ. ಈಗ ಪ್ರಕಟಿಸಲಾಗಿರುವ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಯಲ್ಲಿಯ ಲೋಪದೋಷಗಳನ್ನು ಸರಿಪಡಿಸಲು 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆಗಲೂ ತಮ್ಮ ಬೇಡಿಕೆ ಈಡೇರದಿದ್ದರೆ ಏಳು ದಿನಗಳ ನೋಟಿಸ್ ನೀಡಿ ಚಳವಳಿಯನ್ನು ತೀವ್ರಗೊಳಿಸ ಲಾಗುತ್ತದೆ ಎಂದು ವೇದಿಕೆ ತಿಳಿಸಿದೆ.

ವಿ.ಕೆ. ಸಿಂಗ್ ಅವರು ಸಂಧಾನ ಕಾರರಾಗಿ ನಮ್ಮ ಮತ್ತು ಸರ್ಕಾರದ ಮಧ್ಯೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬೇಗ ಇತ್ಯರ್ಥಪಡಿಸಬೇಕು ಎಂದು ಚಳವಳಿಯ ನೇತೃತ್ವ ವಹಿಸಿರುವ ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್  ಒತ್ತಾಯಿಸಿದರು. ಜಂತರ್ ಮಂತರ್‌ನಲ್ಲಿ ಏರ್ಪಡಿ ಸಲಾಗಿದ್ದ ‘ಸೈನಿಕ್ ಆಕ್ರೋಶ್’ ರ‍್ಯಾಲಿಯಲ್ಲಿ  ಮಾತನಾಡಿದ ಅವರು ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಲಿ ಮತ್ತು ಮಾಜಿ ಸೈನಿಕರು ಬಿಜೆಪಿಗೆ ಮತ ಹಾಕಿದ್ದರಿಂದ ಆ ಪಕ್ಷ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಯಿತು ಎಂದರು.

ಈಗ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ವಂಚಿಸುತ್ತಿದೆ ಎಂದು ಅವರು ಆಪಾದಿಸಿದರು. ಸೈನಿಕರಿಗೆ ವಂಚಿಸಿದ್ದರಿಂದ ದೆಹಲಿ ಮತ್ತು ಬಿಹಾರದಲ್ಲಿ ಬಿಜೆಪಿ ಸೋತಿದೆ. ಮುಂಬರುವ ವಿಧಾನಸಭೆಗಳ  ಚುನಾವ ಣೆಯಲ್ಲಿ ಬಿಜೆಪಿಗೆ ಮತ ಹಾಕಬೆಡಿ ಎಂದು ಅವರು ಸಂಘಟನೆಯ ಸದಸ್ಯರಿಗೆ ಸಲಹೆ ಮಾಡಿದರು.

ಗಣರಾಜ್ಯೋತ್ಸವ ಬಹಿಷ್ಕರಿಸಲು ಕರೆ: ಈ ಬಾರಿಯ ಗಣರಾಜ್ಯೋತ್ವವನ್ನು ಬಹಿಸ್ಕರಿಸುವಂತೆ  ನಿವೃತ್ತ  ಯೋಧರಿಗೆ ಕರೆ ನೀಡಿದರು. ಸರ್ಕಾರ ಪ್ರಕಟಿಸಿರುವ ಒಆರ್‌ಪಿಒ ಬಹುತೇಕ ನಿವೃತ್ತ ಸೈನಿಕರಿಗೆ ಒಪ್ಪಗೆಯಾಗಿದೆ, ಕೆಲವೇ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಹಣಕಾಸು ಸಚಿವ ಜೇಟ್ಲಿ ಹೇಳಿಕೆಗೆ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿರು.

ಹಣಕಾಸು ಸಚಿವರು ಇಲ್ಲಿಗೆ ಬಂದು ಎಷ್ಟು ನಿವೃತ್ತ ಸೈನಿಕರು ನೆರೆದಿದ್ದಾರೆ ಎಂದು ನೋಡಲಿ ಎಂಬುದಾಗಿ ಹೇಳಿದರು. ಪ್ರಧಾನಿ ನರೇಂದ್ರ  ಮೋದಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ನಿವೃತ್ತ ಯೋಧರ ಸಂಘಟನೆಗಳ ಜತೆಗೆ ಸಂವಾದ ನಡೆಸಲಿ. ಆಗ ನಮ್ಮ ಬೇಡಿಕೆ ಸುಳ್ಳು ಎಂದು ಸಾಬಿತಾದರೆ ನಾವು ಚಳವಳಿಯನ್ನು ಕೂಡಲೇ ನಿಲ್ಲಿಸುತ್ತೇವೆ ಎಂದು ಅವರು ಸವಾಲು ಹಾಕಿದರು. ಇದೇ ಸಂದರ್ಭದಲ್ಲಿ ಅವರು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿದರು.

Comments