ಎಸ್‌ಎಆರ್‌ ನ್ಯಾಯಾಲಯಗಳ ರದ್ದು: ರಘುವರ್‌ ದಾಸ್‌ ಘೋಷಣೆಗೆ ಆಕ್ಷೇಪ

ಅಧಿಸೂಚಿತ ಪ್ರದೇಶ ನಿಯಂತ್ರಣ (ಎಸ್‌ಎಆರ್‌) ನ್ಯಾಯಾಲಯಗಳನ್ನು ರದ್ದುಪಡಿಸುವ ರಾಜ್ಯದ ಮುಖ್ಯಮಂತ್ರಿ ರಘುವರ ದಾಸ್‌ ನಿರ್ಧಾರಕ್ಕೆ ಆದಿವಾಸಿಗಳ ಮುಖಂಡರು ವಿರೋಧಿಸಿದ್ದಾರೆ.

ರಾಂಚಿ, ಜಾರ್ಖಂಡ್‌ (ಐಎಎನ್‌ಎಸ್‌): ಅಧಿಸೂಚಿತ ಪ್ರದೇಶ ನಿಯಂತ್ರಣ (ಎಸ್‌ಎಆರ್‌) ನ್ಯಾಯಾಲಯಗಳನ್ನು ರದ್ದುಪಡಿಸುವ ರಾಜ್ಯದ ಮುಖ್ಯಮಂತ್ರಿ ರಘುವರ ದಾಸ್‌ ನಿರ್ಧಾರಕ್ಕೆ ಆದಿವಾಸಿಗಳ ಮುಖಂಡರು ವಿರೋಧಿಸಿದ್ದಾರೆ. ಆದಿವಾಸಿಗಳ ಭೂಮಿಯ ಹಕ್ಕುಗಳ ಕುರಿತು ವಿಚಾರಣೆ ನಡೆಸುವ ಸಲುವಾಗಿ 1969ರಲ್ಲಿ ಚೋಟಾನಾಗ್ಪುರ್ ಹಿಡುವಳಿ ಕಾಯ್ದೆಯ ಅನ್ವಯ ಎಸ್‌ಎಆರ್‌ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು.

‘ಕಾನೂನು ತಜ್ಞರು ಮತ್ತು ರಾಜ ಕೀಯ ಮುಖಂಡರೊಂದಿಗೆ ಚರ್ಚಿಸದೇ ಮುಖ್ಯಮಂತ್ರಿ ರಘುವರ್‌ ದಾಸ್‌ ಅವರು ಎಸ್‌ಎಆರ್‌ ನ್ಯಾಯಾಲ ಯಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದಾರೆ. ಇದೊಂದು ಏಕ ಪಕ್ಷೀಯ ನಿರ್ಧಾರ’ ಎಂದು ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಮರಂಡಿ ಟೀಕಿಸಿದ್ದಾರೆ. ‘ ಅಗತ್ಯ ಬಂದರೆ ಈ ವಿಷ ಯವನ್ನು  ವಿಧಾನ ಸಭೆಯಲ್ಲೂ ಪ್ರಶ್ನಿಸ ಲಾಗುವುದು’ ಎಂದು ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಶಾಸಕ ಚಂಪೈ ಸೊರೆನ್‌ ತಿಳಿಸಿದ್ದಾರೆ.

Comments