ಚೆನ್ನೈ

ಬಿಳಿ ಹುಲಿ ಮರಿಗಳಿಗೆ ಜಯಲಲಿತಾ ನಾಮಕರಣ

ಚೆನ್ನೈ ನಗರದ ಹೊರವಲಯದಲ್ಲಿರುವ ಪ್ರಸಿದ್ಧ ವಂಡಲೂರ್ ಮೃಗಾಲಯದಲ್ಲಿ ಜನ್ಮ ತಾಳಿದ ನಾಲ್ಕು ಬಿಳಿ  ಹುಲಿ ಮರಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಭಾನುವಾರ ನಾಮಕರಣ ಮಾಡಿದರು.

ಚೆನ್ನೈ (ಪಿಟಿಐ): ನಗರದ ಹೊರವಲಯದಲ್ಲಿರುವ ಪ್ರಸಿದ್ಧ ವಂಡಲೂರ್ ಮೃಗಾಲಯದಲ್ಲಿ ಜನ್ಮ ತಾಳಿದ ನಾಲ್ಕು ಬಿಳಿ  ಹುಲಿ ಮರಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಭಾನುವಾರ ನಾಮಕರಣ ಮಾಡಿದರು. ಎರಡು ಗಂಡು ಮರಿಗಳಿಗೆ ದೇವ ಹಾಗೂ ನಕುಲ ಹಾಗೂ ಇನ್ನೆರಡು ಹೆಣ್ಣು ಮರಿಗಳಿಗೆ ಕಲಾ ಹಾಗೂ ಮಾಲಾ ಎಂದು ಅವರು ಹೆಸರಿಟ್ಟರು.

ಪಕ್ಕದ ಕಾಂಚೀಪುರಂ ಜಿಲ್ಲೆಯ ವಂಡಲೂರ್‌ನಲ್ಲಿಯ ಅರಿಗ್ನಾರ್ ಅಣ್ಣಾ ಜೂಲಾಜಿಕಲ್ ಪಾರ್ಕ್‌ನಲ್ಲಿಯ ಬಿಳಿ ಬಣ್ಣದ ಹುಲಿ ನಮೃತಾಗೆ ಈ ಮರಿಗಳು ಹುಟ್ಟಿವೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ಜೂನ್‌ನಲ್ಲೂ ಮುಖ್ಯಮಂತ್ರಿ ಜಯಲಲಿತಾ ಅವರು ನಾಲ್ಕು ಬಿಳಿ ಹೆಣ್ಣು ಹುಲಿ ಮರಿಗಳಿಗೂ ನಾಮಕರಣ ಮಾಡಿದ್ದರು.

Comments