ಉಡುಪಿ

ಬೇತಾಳನಂತೆ ಬೆನ್ನಿಗೆ ಬಿದ್ದ ಬಿಜೆಪಿ: ಆಸ್ಕರ್‌ ಆರೋಪ

‘ದೇಶದ  ಜನತೆ ಬಿಜೆಪಿಗೆ ಸಂಪೂರ್ಣ ಬಹು ಮತ ಕೊಟ್ಟಿದೆ.  ಆದರೆ, ಬಿಜೆಪಿ ಮುಖಂಡರು ಅಭಿವೃದ್ಧಿ ಕೆಲಸವನ್ನು ಕೈಗೊಳ್ಳುವ ಬದಲು ಬೇತಾಳದಂತೆ ನಮ್ಮ ಹಿಂದೆ ಬಿದ್ದಿದ್ದಾರೆ’ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಹೇಳಿದರು.

ಉಡುಪಿ: ‘ದೇಶದ  ಜನತೆ ಬಿಜೆಪಿಗೆ ಸಂಪೂರ್ಣ ಬಹು ಮತ ಕೊಟ್ಟಿದೆ.  ಆದರೆ, ಬಿಜೆಪಿ ಮುಖಂಡರು ಅಭಿವೃದ್ಧಿ ಕೆಲಸವನ್ನು ಕೈಗೊಳ್ಳುವ ಬದಲು ಬೇತಾಳದಂತೆ ನಮ್ಮ ಹಿಂದೆ ಬಿದ್ದಿದ್ದಾರೆ’ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಹೇಳಿದರು.

ಉಡುಪಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟವನ್ನು ಮತ್ತಷ್ಟು ಸದೃಢ ಗೊಳಿ ಸುವ ನಿಟ್ಟಿನಲ್ಲಿ ಪಂಡಿತ್‌ ಜವಾಹರ್‌ ಲಾಲ್‌ ನೆಹರೂ ಅವರು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಯನ್ನು ಆರಂಭಿಸಿದರು. ಅದು ದೇಶದ ಹಿತಕ್ಕಾಗಿ ಆರಂಭಿಸಿದ ಪತ್ರಿಕೆ. ನಾನು ಕೂಡ ಅದರ ಟ್ರಸ್ಟಿಯಾಗಿದ್ದೇನೆ. ಈ ಪತ್ರಿಕಾ ಸಂಸ್ಥೆ ಕಾನೂನಿಗೆ ಬದ್ಧವಾಗಿದೆ ಎಂದು ಜಾರಿನಿರ್ದೇಶನಾಲಯದ ಅಧಿಕಾರಿಯೇ ಆದೇಶ ನೀಡಿದ್ದರು. ಆದರೆ, ಕೇಂದ್ರ  ಅವರನ್ನು ತಕ್ಷಣವೇ ಹುದ್ದೆಯಿಂದ ವರ್ಗಾವಣೆ ಮಾಡಿತು. ಆ ಹುದ್ದೆಗೆ ಮತ್ತೊಬ್ಬರನ್ನು ನೇಮಕ ಮಾಡಿ, ಜಾರಿ ನಿರ್ದೇಶನಾಲಯವನ್ನು  ದುರುಪ ಯೋಗ ಪಡಿಸಿಕೊಂಡು ವಿನಾ ಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

ಬಂಡುಕೋರರ ವಿರುದ್ಧ ಕ್ರಮ: ಪ್ರಜಾ ಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾ ವಣೆಗೆ ಸ್ಪರ್ಧಿಸುವ ಹಕ್ಕು ಇದೆ. ಆದರೆ, ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಪಕ್ಷ ಸೂಕ್ತ ಕ್ರಮ ಜರುಗಿಸುತ್ತದೆ.  ಒಮ್ಮತದಿಂದ ಆಯ್ಕೆ ಮಾಡಿದ ಅಭ್ಯರ್ಥಿಯೇ ಅಧಿಕೃತ ಅಭ್ಯರ್ಥಿಯಾಗಿರುತ್ತಾರೆ. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಯಾರೇ ಸ್ಪರ್ಧಿಸಿ ದರೂ ಅವರು ಪಕ್ಷದ ಅಭ್ಯರ್ಥಿ ಆಗುವುದಿಲ್ಲ ಎಂದರು.

Comments