ಮುಂಬೈ

ಐಡಿಬಿಐ ಬ್ಯಾಂಕ್‌ ಸಾಲ ಬಾಕಿ: ವಿಜಯ್‌ ಮಲ್ಯಗೆ ‘ಇಡಿ’ ಸಮನ್ಸ್‌

ಐಡಿಬಿಐ ಬ್ಯಾಂಕ್‌ಗೆ ಬಾಕಿ ಉಳಿಸಿಕೊಂಡಿರುವ ₹ 900 ಕೋಟಿ ಸಾಲ ಮರು ಪಾವತಿಗೆ ಸಂಬಂಧಿಸಿದಂತೆ ಮಾರ್ಚ್‌ 18ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್‌ ಜಾರಿಗೊಳಿಸಿದೆ.

ಐಡಿಬಿಐ ಬ್ಯಾಂಕ್‌ ಸಾಲ ಬಾಕಿ: ವಿಜಯ್‌ ಮಲ್ಯಗೆ ‘ಇಡಿ’ ಸಮನ್ಸ್‌

ಮುಂಬೈ (ಪಿಟಿಐ): ಐಡಿಬಿಐ ಬ್ಯಾಂಕ್‌ಗೆ ಬಾಕಿ ಉಳಿಸಿಕೊಂಡಿರುವ ₹ 900 ಕೋಟಿ ಸಾಲ ಮರು ಪಾವತಿಗೆ ಸಂಬಂಧಿಸಿದಂತೆ ಮಾರ್ಚ್‌ 18ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್‌ ಜಾರಿಗೊಳಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ ಫಿಶರ್‌ ಏರ್‌ಲೈನ್ಸ್‌ನ ಮಾಜಿ ಹಣಕಾಸು ಅಧಿಕಾರಿ ರಘುನಾಥನ್‌  ಅವರನ್ನು ಜಾರಿ  ನಿರ್ದೇಶನಾಲಯ ಗುರುವಾರ ವಿಚಾರಣೆಗೆ ಒಳಪಡಿಸಿತ್ತು. ಕಿಂಗ್‌ಪಿಶರ್‌ನ ಆರ್ಥಿಕ ಸಂಕಷ್ಟಕ್ಕೆ ಮಲ್ಯ ಅವರೇ ಹೊಣೆ, ಅವರು ಹೇಳಿದಂತೆ  ನಾನು ಕೆಲಸ ಮಾಡಿದ್ದೇನೆ ಎಂದು ರಘುನಾಥನ್‌ ಹೇಳಿರುವುದಾಗಿ ಮೂಲಗಳು ಹೇಳಿವೆ.

ರಘುನಾಥನ್‌ ಅವರಿಂದ ಕಿಂಗ್‌ಪಿಶರ್‌ ಏರ್‌ಲೈನ್ಸ್‌ನ ಹಣಕಾಸು ವಹಿವಾಟು ಮಾಹಿತಿ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಡಿಬಿಐ ಬ್ಯಾಂಕ್‌ನ 6ಕ್ಕೂ ಹೆಚ್ಚು ಅಧಿಕಾರಿಗಳಿಗೂ ‘ಇಡಿ’ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಕಿಂಗ್‌ಪಿಶರ್‌ ಏರ್‌ಲೈನ್ಸ್‌ನ ಉನ್ನತ ಅಧಿಕಾರಿಗಳಿಗೆ ವೈಯಕ್ತಿಕ ಹಣಕಾಸು ವಹಿವಾಟು ಮಾಹಿತಿ ಮತ್ತು ಕಳೆದ 5 ವರ್ಷಗಳ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಿದ (ಐಟಿ ರಿಟರ್ನ್‌) ವಿವರ ನೀಡುವಂತೆಯೂ ‘ಇಡಿ’ ಸೂಚಿಸಿದೆ.

Comments