ನವದೆಹಲಿ

ಚರ್ಚೆ ನಡುವೆ ರಾಹುಲ್‌ ನಿದ್ದೆ

ಗುಜರಾತ್‌ನಲ್ಲಿ ನಡೆದಿದ್ದ ದಲಿತರ ಮೇಲಿನ ಹಲ್ಲೆ ಪ್ರಕರಣದ ಚರ್ಚೆ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿದ್ದೆಗೆ ಜಾರಿದ ಘಟನೆ  ಲೋಕಸಭೆಯಲ್ಲಿ ಬುಧವಾರ ನಡೆದಿದೆ.

ಚರ್ಚೆ ನಡುವೆ ರಾಹುಲ್‌ ನಿದ್ದೆ

ನವದೆಹಲಿ (ಪಿಟಿಐ): ಗುಜರಾತ್‌ನಲ್ಲಿ ನಡೆದಿದ್ದ ದಲಿತರ ಮೇಲಿನ ಹಲ್ಲೆ ಪ್ರಕರಣದ ಚರ್ಚೆ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿದ್ದೆಗೆ ಜಾರಿದ ಘಟನೆ  ಲೋಕಸಭೆಯಲ್ಲಿ ಬುಧವಾರ ನಡೆದಿದೆ.

ಬಿಜೆಪಿ ಮತ್ತು ಬಿಎಸ್‌ಪಿ ರಾಹುಲ್‌ ಅವರನ್ನು ಟೀಕಿಸಿದ್ದು, ‘ದಲಿತರ ವಿಷಯದಲ್ಲಿ ರಾಹುಲ್‌ ಎಷ್ಟು ಗಂಭೀರವಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ’ ಎಂದಿವೆ.

ಆದರೆ ಕಾಂಗ್ರೆಸ್‌ ಪಕ್ಷ ತನ್ನ ಉಪಾಧ್ಯಕ್ಷನ ಬೆಂಬಲಕ್ಕೆ ನಿಂತಿದ್ದು, ರಾಹುಲ್‌ ತಮ್ಮ ಮೊಬೈಲ್‌ ಫೋನ್‌ ನೋಡುತ್ತಿದ್ದರು ಎಂದು ಹೇಳಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ಕುರಿತ ಚರ್ಚೆಯ ಬಳಿಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉತ್ತರಿಸುತ್ತಿದ್ದಾಗ ರಾಹುಲ್ ನಿದ್ದೆ ಮಾಡುತ್ತಿರುವ ದೃಶ್ಯವನ್ನು ಲೋಕಸಭಾ ಟಿ.ವಿ ಪ್ರಸಾರ ಮಾಡಿದೆ.

‘ಸಂತ್ರಸ್ತ ದಲಿತರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶ ರಾಹುಲ್‌ಗೆ ಇಲ್ಲ. ರಾಜಕೀಯ ಮಾಡಲು ಮಾತ್ರ ಬಯಸುತ್ತಾರೆ. ದಲಿತರಿಗೆ ನ್ಯಾಯ ದೊರಕಿಸಿಕೊಡುವ ಆಸಕ್ತಿಯಿದ್ದಲ್ಲಿ ಅವರು ನಿದ್ರಿಸುತ್ತಿರಲಿಲ್ಲ’ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ತಾವರ್‌ ಚಂದ್ ಗೆಹ್ಲೊಟ್‌ ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಮೋದಿ ಸರ್ಕಾರದ ವೈಫಲ್ಯಗಳ ಮನವರಿಕೆಗೆ ಮಾಧ್ಯಮಗೋಷ್ಠಿ

ಎನ್‌ಡಿಎ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿರುವ ಸುಳ್ಳುಗಳು, ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು, ದೇಶದ ಆರ್ಥಿಕ ಸ್ಥಿತಿ,...

23 May, 2017

ಚೆನ್ನೈ
ದೂರವಾಣಿ: ವಿಚಾರಣೆಗೆ ಹಾಜರಾಗದ ಮಾರನ್‌

ದಯಾನಿಧಿ ಮಾರನ್ ನಿವಾಸಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ಅಧಿಕ ಸಾಮರ್ಥ್ಯದ 764 ದೂರವಾಣಿ ಸಂಪರ್ಕವನ್ನು ಅಕ್ರಮವಾಗಿ  ಸನ್ ಟಿ.ವಿ ವಾಹಿನಿಯವರು ಬಳಸಿಕೊಂಡ ಆರೋಪದಲ್ಲಿ 2016ರ ಡಿಸೆಂಬರ್‌...

23 May, 2017
ಸಾಲ ವಸೂಲಿ ಸುಗ್ರೀವಾಜ್ಞೆ: ಶೀಘ್ರ ಆರ್‌ಬಿಐ ಮಾರ್ಗಸೂಚಿ ಪ್ರಕಟ

ನವದೆಹಲಿ
ಸಾಲ ವಸೂಲಿ ಸುಗ್ರೀವಾಜ್ಞೆ: ಶೀಘ್ರ ಆರ್‌ಬಿಐ ಮಾರ್ಗಸೂಚಿ ಪ್ರಕಟ

23 May, 2017
ಅರವಿಂದ ಕೇಜ್ರಿವಾಲ್‌ ವಿರುದ್ಧ ಮತ್ತೊಂದು ಮಾನನಷ್ಟ ಪ್ರಕರಣ

ನವದೆಹಲಿ
ಅರವಿಂದ ಕೇಜ್ರಿವಾಲ್‌ ವಿರುದ್ಧ ಮತ್ತೊಂದು ಮಾನನಷ್ಟ ಪ್ರಕರಣ

23 May, 2017
ರಜನಿಕಾಂತ್ ವಿರುದ್ಧ ಪ್ರತಿಭಟನೆ

ಚೆನ್ನೈ
ರಜನಿಕಾಂತ್ ವಿರುದ್ಧ ಪ್ರತಿಭಟನೆ

23 May, 2017