ರಸಾಸ್ವಾದ

ಚೈನೀಸ್‌ ಖಾದ್ಯಗಳ ಸವಿ ಸಿಗಡಿ ಮೀನಿನ ರುಚಿ

ಟ್ರಿನಿಟಿ ಸರ್ಕಲ್‌ನಲ್ಲಿರುವ ಒನ್‌ ಎಂ.ಜಿ. ಮಾಲ್‌ನಲ್ಲಿ   ಆರು ತಿಂಗಳ ಹಿಂದೆಷ್ಟೇ ಆರಂಭವಾದ ಯವುಚಾ ಟೆರೇಸ್ ರೆಸ್ಟೊರೆಂಟ್‌ ನಗರದ ಇತರ ರೆಸ್ಟೊರೆಂಟ್‌ಗಳಿಗೆ ಹೋಲಿಸಿದರೆ  ತುಸು ಭಿನ್ನವಾಗಿದೆ.

ಚಿಕನ್‌ ರೋಲ್‌

ಟ್ರಿನಿಟಿ ಸರ್ಕಲ್‌ನಲ್ಲಿರುವ ಒನ್‌ ಎಂ.ಜಿ. ಮಾಲ್‌ನಲ್ಲಿ   ಆರು ತಿಂಗಳ ಹಿಂದೆಷ್ಟೇ ಆರಂಭವಾದ ಯವುಚಾ ಟೆರೇಸ್ ರೆಸ್ಟೊರೆಂಟ್‌ ನಗರದ ಇತರ ರೆಸ್ಟೊರೆಂಟ್‌ಗಳಿಗೆ ಹೋಲಿಸಿದರೆ  ತುಸು ಭಿನ್ನವಾಗಿದೆ.

ಚೈನೀಸ್‌ ಖಾದ್ಯ ಬಡಿಸಲು ಹೆಸರುವಾಸಿಯಾಗಿರುವ  ಒನ್‌ ಎಂ.ಜಿ. ಮಾಲ್‌ ಯವುಚಾ ರೆಸ್ಟೊರೆಂಟ್‌  ಮೇಲ್ಭಾಗದಲ್ಲಿ ಈ ಯವುಚಾ ಟೆರೇಸ್‌ ರೆಸ್ಟೊರೆಂಟ್‌ ಇದ್ದು, ಇಲ್ಲಿ ಡ್ರಿಂಕ್ಸ್‌ (ಕಾಕ್‌ಟೇಲ್‌ ಹಾಗೂ ಮಾಕ್‌ಟೇಲ್‌) ಹಾಗೂ ಸ್ಟಾರ್ಟರ್ಸ್‌ಗಳು ಮಾತ್ರ ಲಭ್ಯ.

ಯವುಚಾ ಟೆರೇಸ್‌ ಚೈನೀಸ್‌ ಖಾದ್ಯಗಳಿಗೆ ಪ್ರಸಿದ್ಧವಾಗಿದೆ. ಸದ್ಯ ಗ್ರಾಹಕರಿಗಾಗಿ ಚಿಕನ್‌ ಹಾಗೂ ಟೈಗರ್‌ ಪ್ರಾನ್ಸ್‌ನ ವಿಶೇಷ ಖಾದ್ಯಗಳನ್ನು ಹೊಸದಾಗಿ ಪರಿಚಯಿಸಲಾಗಿದೆ. ಇಲ್ಲಿನ ಮೆನು ಪಟ್ಟಿಗೆ ಚೈನೀಸ್‌ನ 10ಕ್ಕೂ ಹೆಚ್ಚು ಬಗೆಯ ಸ್ಟಾರ್ಟರ್ಸ್‌ಗಳು ಹಾಗೂ 5ಕ್ಕೂ ಹೆಚ್ಚು ರೀತಿಯ ವಿವಿಧ ಡ್ರಿಂಕ್ಸ್‌ಗಳನ್ನು ಪರಿಚಯಿಸಲಾಗಿದೆ.

ಮಂಗೋಲಿಯನ್‌ ಚಿಕನ್‌, ಸಾಲ್ಟ್‌ ಆ್ಯಂಡ್‌ ಪೆಪ್ಪರ್‌ ಪ್ರಾನ್ಸ್‌, ಕ್ರಿಸ್ಪಿ ಚಿಕನ್‌ ರೋಲ್‌, ಗೋಲ್ಡನ್‌ ಫ್ರೈಡ್‌ ಪ್ರಾನ್‌ ಇಲ್ಲಿನ ಹೊಸ ಸಿಗ್ನೇಚರ್‌ ತಿನಿಸುಗಳು. ವೆಜಿಟಬಲ್‌ ಸ್ಪ್ರಿಂಗ್‌ ರೋಲ್‌, ವಿಯೆಟ್ನಿಸ್‌ ಸ್ಪ್ರಿಂಗ್‌ ರೋಲ್‌, ಗುವಂಗ್‌ ಡೊಂಗ್‌ ರೋಸ್ಟ್‌ ಚಿಕನ್‌ ಕ್ರಿಸ್ಪಿ ವಿಂಗ್ಲೆಟ್‌ಗಳ ರುಚಿ ಸ್ವಾದಿಷ್ಟವಾಗಿದೆ.

ಸ್ಲೈಸಿ ಚಿಕನ್ ಚಿಲ್ಲಿ ಫ್ರೈಯ್ಡ್‌ ಸ್ಕ್ವಿಡ್‌, ಸ್ಲೈಸಿ ಟೈಗರ್‌ ಪ್ರಾನ್‌, ಮಶ್ರೂಮ್‌ ಸ್ಟಿರ್‌ ಫ್ರೈ ಸಿಹಿ, ಹುಳಿ ಹಾಗೂ ಖಾರ ಮಿಶ್ರಣದಿಂದಾಗಿ ಹೆಚ್ಚು ಇಷ್ಟವಾಗುತ್ತದೆ. ಇಲ್ಲಿ ಸಿಗಡಿಗಳನ್ನು ಮುಂಬೈಯಿಂದ ತರಿಸಲಾಗಿದ್ದು, ತಾಜಾ ಸಿಗಡಿ ಮೀನುಗಳ ಖಾದ್ಯಗಳನ್ನೂ ತಿಂದಷ್ಟೂ ಮತ್ತಷ್ಟು ತಿನ್ನಬೇಕೆನಿಸುತ್ತದೆ.

ಇನ್ನು ಇಲ್ಲಿ ಕಾಕ್‌ಟೇಲ್‌ ಹಾಗೂ ಮಾಕ್‌ಟೇಲ್‌ಗಳಲ್ಲಿ ವೈವಿಧ್ಯಮಯ ಆಯ್ಕೆ ಇದೆ. ಊಲಾಂಗ್‌ ಟೀ ಹಾಗೂ ಚಾ ಲಾ ಲೈ, ಲಲು, ಬಸಿಲ್‌ ಆ್ಯಂಡ್‌ ಕುಕುಂಬರ್‌ ಐಸ್ಡ್‌ ಟೀ, ‘ಜಿಂಜರ್‌ ಐಸ್ಡ್‌ ಟೀ’, ‘ಕರ್ರಿ ಲೀಫ್‌ ಐಸ್ಡ್‌ ಟೀ’ ಇಲ್ಲಿನ ಸಿಗ್ನೇಚರ್‌ ಕಾಕ್‌ಟೇಲ್‌ಗಳು.

ಹಳೇ ಮೆನು ಪಟ್ಟಿಯ ತಿನಿಸುಗಳಾದ ಬ್ಲಾಕ್‌ ಪೆಪ್ಪರ್‌ ಲ್ಯಾಂಪ್‌ ಸ್ಕಿಪರ್‌, ಕ್ರಿಸ್ಪಿ ವೆಜಿಟಬಲ್ಸ್‌, ಇಂಡಿಯನ್‌ ಸಾಲ್ಮೋನ್‌ ಇನ್ ಸಾಸ್‌ ಇವುಗಳ ರುಚಿಯನ್ನೂ ಸವಿಯಬಹುದು.

ಈ ಎಲ್ಲವೂ ಚೈನೀಸ್‌ ಖಾದ್ಯಗಳಾಗಿದ್ದರೂ ರುಚಿಯಲ್ಲಿ ಹೆಚ್ಚು ಇಷ್ಟವಾಗುತ್ತವೆ.  ಇಲ್ಲಿ  ಬಹುತೇಕ ಎಲ್ಲವೂ ಚಿಕನ್‌ ಹಾಗೂ ಟೈಗರ್‌ ಪ್ರಾನ್ಸ್‌ನ ಸ್ಟಾರ್ಟರ್ಸ್‌ಗಳಾಗಿದ್ದು, ಬೇರೆ ಬಗೆಯ ಮೀನು ಅಥವಾ ತರಕಾರಿ ಬಯಸುವವರಿಗೆ ಕೊಂಚ ನಿರಾಸೆಯಾಗಬಹುದು. ಆದರೆ ಪ್ರಾನ್‌ ಇಷ್ಟಪಡುವವರಿಗೆ ಬಗೆ ಬಗೆ ಸ್ಟಾರ್ಟರ್ಸ್‌ ಸಿಗುತ್ತವೆ.

ಯವುಚಾ ಟೆರೇಸ್‌ನ ಎಲ್ಲಾ ತಿನಿಸುಗಳಿಗೆ ಕಡಿಮೆ ಪ್ರಮಾಣದ ಖಾರವನ್ನು ಬಳಸಿಕೊಳ್ಳಲಾಗಿದೆ. ಗ್ರಾಹಕರು ಆಯಾ ಖಾದ್ಯಕ್ಕೆ ಹೊಂದುವಂತಹ ಸೈಡ್ಸ್‌, ಡ್ರಿಂಕ್‌ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಈ ರೆಸ್ಟೊರೆಂಟ್‌ನಲ್ಲಿ ಸಾಸ್‌ಗಳ ರುಚಿ ಕೂಡಾ ವಿಶಿಷ್ಟವಾಗಿದೆ. ಟೊಮೆಟೊ ಸಾಸ್‌ ಹಾಗೂ ಬೆಳ್ಳುಳ್ಳಿ, ಚಿಲ್ಲಿ ಮಿಶ್ರಣದ ಬ್ಲಾಕ್‌ ಸಾಸ್‌ ಸ್ಟಾರ್ಟರ್ಸ್‌ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವಂತೆ ಮಾಡುತ್ತವೆ.

ಯವುಚಾ ಟೆರೇಸ್‌, ಒನ್‌ ಎಂ.ಜಿ. ಮಾಲ್‌ನ ಕೊನೆಯ ಅಂತಸ್ತಿನಲ್ಲಿರುವ ಟೆರೇಸ್‌ನಲ್ಲಿದೆ. ಇಲ್ಲಿ ಜೋರಾಗಿ ಬೀಸುವ ಗಾಳಿ, ವಿಶಾಲವಾದ ಅಂಗಣದಲ್ಲಿ ಆರಾಮದಾಯಕ ಕುರ್ಚಿಗಳು, ವಿನ್ಯಾಸ ಎಲ್ಲವೂ ಮನಸೆಳೆಯುತ್ತವೆ. ಇದು ಗುರುವಾರ, ಶುಕ್ರವಾರ ಹಾಗೂ ಶನಿವಾರ ಸಂಜೆಯಿಂದ ರಾತ್ರಿ ತನಕ ತೆರೆದಿರುತ್ತದೆ.

ಹೋಟೆಲ್‌: ಯವುಚಾ ಟೆರೇಸ್‌
ಸಮಯ: ಗುರುವಾರ–ಶುಕ್ರವಾರ–ಶನಿವಾರ (ಮೂರು ದಿನಗಳು ಮಾತ್ರ) ಸಂಜೆ 7ರಿಂದ 12
ಬೆಲೆ: ಇಬ್ಬರಿಗೆ ತಗಲುವ ವೆಚ್ಚ  ₹1800 (ಡ್ರಿಂಕ್‌ ಸೇರಿ)
ಸ್ಥಳ: ಯವುಚಾ ಟೆರೇಸ್‌, ಲೆವೆಲ್‌ 6, ಒನ್‌ ಎಂ.ಜಿ. ಮಾಲ್‌, ಟ್ರಿನಿಟಿ ಸರ್ಕಲ್‌ ಸಮೀಪ, ಎಂ.ಜಿ. ರಸ್ತೆ.
ಟೇಬಲ್‌ ಕಾಯ್ದಿರಿಸಲು: 92222 22800

Comments
ಈ ವಿಭಾಗದಿಂದ ಇನ್ನಷ್ಟು
ಮರುವಾಯಿ ಗಸಿ ಏಡಿ ಸುಕ್ಕ...

ಮಾಂಸಾಹಾರ
ಮರುವಾಯಿ ಗಸಿ ಏಡಿ ಸುಕ್ಕ...

17 Feb, 2018
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

23 Jun, 2017
ದೋಸೆಯ ರುಚಿ ಹೆಚ್ಚಿಸುವ ಕೋಳಿಗಸ್ಸಿ!

ಪ್ರಜಾವಾಣಿ ರೆಸಿಪಿ
ದೋಸೆಯ ರುಚಿ ಹೆಚ್ಚಿಸುವ ಕೋಳಿಗಸ್ಸಿ!

2 Jun, 2017
ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

ಮಾಂಸಾಹಾರ
ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

9 May, 2017
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

ಪ್ರಜಾವಾಣಿ ರೆಸಿಪಿ
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

28 Apr, 2017