ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವಿಜ್ಞಾನದಲ್ಲಿ ತಂತ್ರಜ್ಞಾನದ ಪಾತ್ರ

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನವು ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಬಹು ಮುಖ್ಯಪಾತ್ರವನ್ನು ವಹಿಸುತ್ತಿದೆ. ಶಸ್ತ್ರಚಿಕಿತ್ಸೆಯಲ್ಲಿ ಯಂತ್ರಮಾನವನ (ರೋಬೊ) ಬಳಕೆಯೂ  ಹೆಚ್ಚುತ್ತಿದೆ. ರೊಬೊಟಿಕ್ ಸಾಧನಗಳು ಮಾನವನ ಕೈಗಳಿಗಿಂತ ಹೆಚ್ಚು  ಮುಕ್ತವಾಗಿ ಸಂಚರಿಸುವುದರಿಂದ ಶಸ್ತ್ರಚಿಕಿತ್ಸೆಯು  ಹೆಚ್ಚು ನಿಖರವೂ ಆಗಿರುತ್ತದೆ. 

ಶಸ್ತ್ರಚಿಕಿತ್ಸಕರಲ್ಲಿ ಕೆಲವೊಮ್ಮೆ ನಡುಕವು ಸಾಮಾನ್ಯವಾಗಿರುತ್ತದೆ. ರೊಬೊಟಿಕ್ ಶಸ್ತ್ರಕ್ರಿಯೆಯಲ್ಲಿ ಈ ಸಮಸ್ಯೆಯೂ ಇರುವುದಿಲ್ಲ. ಹೆಚ್ಚಿನ ರೆಸಲ್ಯೂಷನ್ ಹೊಂದಿದ ಕ್ಯಾಮೆರಾಗಳನ್ನು ಶಸ್ತ್ರಕ್ರಿಯೆಯಲ್ಲಿ ಬಳಸಲಾಗುತ್ತಿರುವುದರಿಂದ, ಸಾಮಾನ್ಯ ಶಸ್ತ್ರಕ್ರಿಯೆಯಲ್ಲಿ ನೋಡಲು ಸಾಧ್ಯವಿರದ ಭಾಗಗಳನ್ನು ಸುಲಭವಾಗಿ ವೀಕ್ಷಿಸಬಹುದಾಗಿದೆ. ಇದರಿಂದ ಶಸ್ತ್ರಚಿಕಿತ್ಸೆಯ ನಿಖರತೆಯೂ ಹೆಚ್ಚಿದೆ.

ವೈದ್ಯಕೀಯ ತಂತ್ರಜ್ಞಾನ ಆಧಾರಿತ ಬ್ಯಾರಿಯಾಟ್ರಿಕ್ ಸರ್ಜರಿಯು ಅತಿಯಾದ ಬೊಜ್ಜಿನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ  ದೇಹದ ತೂಕ  ಇಳಿಸಲು ಮತ್ತು ನಿಯಂತ್ರಿಸಲು ಇರುವ ಒಂದು ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಇತರ ಸರ್ಜರಿಗಳಿಗೆ ಹೋಲಿಸಿದರೆ ಬ್ಯಾರಿಯಾಟ್ರಿಕ್ ಸರ್ಜರಿಯು ತಾಂತ್ರಿಕವಾಗಿ ಬಹಳ ಪ್ರಗತಿ  ಹೊಂದಿದೆ. ರೋಗಿಗಳ ಸುರಕ್ಷತೆ ಮತ್ತು ಅವರ ಶೀಘ್ರ ಚೇತರಿಕೆಯಲ್ಲಿ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗವು ಒಂದಕ್ಕೊಂದು ಹೇಗೆ ಪೂರಕವಾಗಿ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಇದೊಂದು ಸೂಕ್ತ ನಿದರ್ಶನವಾಗಿದೆ.

ಈ ಚಿಕಿತ್ಸೆಯಲ್ಲಿ ವ್ಯಕ್ತಿಯ ಉದರ ಮತ್ತು ಕರುಳಿನಲ್ಲಿ ತಾಂತ್ರಿಕವಾಗಿ ಕೆಲವು ಬದಲಾವಣೆ  ಮಾಡಲಾಗುತ್ತದೆ, ಇದರಿಂದಾಗಿ ಕಾಲಾಂತರದಲ್ಲಿ ವ್ಯಕ್ತಿಯ ತೂಕವು ಕಡಿಮೆಯಾಗುತ್ತದೆ. ಈ ಸರ್ಜರಿಯಿಂದಾಗಿ ಹಸಿವು ಕಡಿಮೆಯಾಗುವುದಲ್ಲದೇ, ಸ್ವಲ್ಪವೇ ಆಹಾರ ಸೇವಿಸಿದರೂ ಹೊಟ್ಟೆ ತುಂಬಿದ ಅನುಭವವವಾಗುತ್ತದೆ.

ವ್ಯಕ್ತಿಯ ಆಹಾರ ಸೇವನೆಯ ಪ್ರಮಾಣವು ಕಡಿಮೆಯಾಗುವುದರಿಂದ ದೇಹವು ತನ್ನಲ್ಲಿರುವ ಕೊಬ್ಬನ್ನು ಕರಗಿಸಿ ತನ್ನ ಚಟುವಟಿಕೆಗಳಿಗೆ ಶಕ್ತಿ ಪೂರೈಸಲು ಆರಂಭಿಸುತ್ತದೆ. ವ್ಯಕ್ತಿಯು 12 ರಿಂದ 18 ತಿಂಗಳ ಅವಧಿಯಲ್ಲಿ ಕ್ರಮವಾಗಿ ಮತ್ತು ಆರೋಗ್ಯಕರ ರೀತಿಯಲ್ಲಿ ಬೊಜ್ಜನ್ನು ಕಳೆದುಕೊಳ್ಳುತ್ತಾನೆ.

‘ನಾಲ್ಕು ದಶಕಗಳಿಂದಲೂ ಬ್ಯಾರಿಯಾಟ್ರಿಕ್ ಶಸ್ತ್ರಕ್ರಿಯೆಗಳು ಪ್ರಚಲಿತದಲ್ಲಿದ್ದು, ವಿವಿಧ ರೀತಿಯ ಶಸ್ತ್ರಚಿಕಿತ್ಸಾ ಕ್ರಮಗಳು ಲಭ್ಯ ಇವೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದಂತೆಲ್ಲಾ, ವರ್ಷದಿಂದ ವರ್ಷಕ್ಕೆ ಈ ಚಿಕಿತ್ಸೆಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ’ ಎಂದು  ಬೊಜ್ಜು ನಿವಾರಣೆ ಮತ್ತು ಬೆರಿಯಾಟ್ರಿಕ್ ಸರ್ಜನ್ ಡಾ. ರಾಜಶೇಖರ್ ನಾಯಕ್ ತಿಳಿಸುತ್ತಾರೆ.

ಸಂಕೀರ್ಣ ಸ್ವರೂಪದ ಶಸ್ತ್ರ ಚಿಕಿತ್ಸೆ, ಚೇತರಿಕೆಗೆ ಹೆಚ್ಚು ದಿನಗಳು ಮತ್ತಿತರ ಕಾರಣಗಳಿಂದಾಗಿ ಗಂಭೀರವಾದ ಬೊಜ್ಜನ್ನು ನಿವಾರಿಸುವ ಚಿಕಿತ್ಸೆಯಾಗಿ ಬ್ಯಾರಿಯಾಟ್ರಿಕ್ ಸರ್ಜರಿಯು ಹೆಚ್ಚು ಪ್ರಚಾರವನ್ನು ಪಡೆಯಲಿಲ್ಲ. ರೋಗಿಗಳು ಈ ಶಸ್ತ್ರಕ್ರಿಯೆಗೆ ಒಳಗಾಗಲು ಹಿಂಜರಿಯುತ್ತಿದ್ದರು. ತಂತ್ರಜ್ಞಾನದ ಬೆಳವಣಿಗೆಯಿಂದ ಲ್ಯಾಪ್ರೊಸ್ಕೊಪಿಕ್ ಸರ್ಜರಿಯ ಬಳಕೆಯಿಂದಾಗಿ ಬ್ಯಾರಿಯಾಟ್ರಿಕ್ ಚಿಕಿತ್ಸೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ.

ತಂತ್ರಜ್ಞಾನದ ಈ ಪ್ರಗತಿಯಿಂದಾಗಿ ಈ ಚಿಕಿತ್ಸೆಯ ಬಳಕೆ ಹೆಚ್ಚುತ್ತಿದೆ. ಲ್ಯಾಪ್ರೊಸ್ಕೊಪಿಕ್ ಶಸ್ತ್ರಕ್ರಿಯೆಯ ಬಳಕೆಯಿಂದಾಗಿ ಬ್ಯಾರಿಯಾಟ್ರಿಕ್ ಆಪರೇಷನ್‌ಗಳ ಸಂಖ್ಯೆಯೂ  ಹೆಚ್ಚಾಗಿದೆ.  ಉದರ ಭಾಗದ ಶಸ್ತ್ರಕ್ರಿಯೆಯಲ್ಲಿ ಈ ವಿಧಾನವು ಚಾಲ್ತಿಯಲ್ಲಿದ್ದು, ರೋಗಿಗಳಿಗೆ ಬಹಳ ಲಾಭದಾಯಕವಾಗಿದೆ. ಈ ಚಿಕಿತ್ಸೆಯಲ್ಲಿ ಬಳಸುವ ಕೆಲವು ಸಾಧನಗಳಲ್ಲಿಯೂ ಬಹಳ ಸುಧಾರಣೆಗಳಾಗಿವೆ.  ಮಾಹಿತಿಗೆ ಸಂಪರ್ಕಿಸಿ: 080-46462600 / 080-26673585.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT