ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

* ವಿಪರೀತ ಮದ್ಯಪಾನ ಹಾಗೂ ಧೂಮಪಾನದ ದಾಸನಾಗಿದ್ದೇನೆ. ಇದನ್ನು ಬಿಡುವುದು ಹೇಗೆ?
-ನಂಜುಂಡ, ಬನ್ನೇರುಘಟ್ಟ


ನಿಮ್ಮ ಚಟದ ಬಗ್ಗೆ ನಿಮಗೆ ಅರಿವು ಇರುವುದು ತುಂಬಾ ಸಂತೋಷ. ಇವು ನಿಮ್ಮನ್ನೇ ಬಲಿ ತೆಗೆದುಕೊಳ್ಳಬಹುದಾದ ಅಪಾಯಕಾರಿ ಚಟಗಳು. ಇದರಿಂದ ಹೊರಬರಲು ನೀವು ದೃಢಸಂಕಲ್ಪ ಮಾಡಬೇಕಾಗುತ್ತದೆ. ಧೂಮಪಾನ ಒಂದೇ ಬಾರಿಗೆ ಬಿಡುವುದು ಕಷ್ಟವಾದಲ್ಲಿ ಅದನ್ನು ಸ್ವಲ್ಪಸ್ವಲ್ಪ ಕಮ್ಮಿ ಮಾಡುತ್ತಾ ಬನ್ನಿ.

ಕುಡಿತಕ್ಕೆ ಪ್ರೋತ್ಸಾಹಿಸುವುದು ಹೆಚ್ಚಾಗಿ ಸ್ನೇಹಿತರಾಗಿರುವ ಕಾರಣ, ಅಂಥವರಿಂದ ಆದಷ್ಟು ದೂರವಿರಿ. ಇದು ನಿಮಗೆ ಆರಂಭದಲ್ಲಿ ಕಷ್ಟವಾದೀತು. ಒಂದೇ ಬಾರಿಗೆ ಸಂಪೂರ್ಣವಾಗಿ ಚಟದಿಂದ ಮುಕ್ತಿ ಹೊಂದುವುದು ಕೂಡ ಸ್ವಲ್ಪ ಕಷ್ಟವಾಗಬಹುದು. ಹಾಗೆಂದು ಚಟದಿಂದ ಮುಕ್ತಹೊಂದುವ ನಿಮ್ಮ ಮನಸ್ಸನ್ನು ಬದಲಾಯಿಸಲು ಹೋಗಬೇಡಿ.

ಎಷ್ಟೇ ಮಾಡಿದರೂ ಚಟಗಳನ್ನು ಬಿಡಲು ಆಗದಿದ್ದರೆ ಇದನ್ನು ಬಿಡಿಸುವುದಕ್ಕಾಗಿಯೇ ಕೆಲವೊಂದು ಕೇಂದ್ರಗಳು ಇವೆ, ಅಲ್ಲಿಂದ ಸಹಾಯ ಪಡೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಕುಟುಂಬ ಮತ್ತು ‘ಉತ್ತಮ’ ಸ್ನೇಹಿತರ ಅವಶ್ಯಕತೆಯೂ ಇದೆ.

**
* ನಾನು ನನ್ನ ಬಾಲ್ಯದ ಸ್ನೇಹಿತೆಯನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಆದರೆ ಅವಳ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವಳ ಗಂಡ ಕುಡುಕ. ಆತನನ್ನು ಅವಳು ಪ್ರೀತಿಸುತ್ತಿಲ್ಲ. ಅವಳಿಗೂ ನನ್ನನ್ನು ಕಂಡರೆ ಇಷ್ಟ. ನಾವಿಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆವು. ಆದರೆ ಇಬ್ಬರು ಮಕ್ಕಳ ತಾಯಿಯನ್ನು ಹೇಗೆ ಮದುವೆಯಾಗುವುದು ಎಂಬ ಚಿಂತೆ ಈಗ ನನ್ನನ್ನು ಕಾಡುತ್ತಿದೆ, ಏನು ಮಾಡುವುದು?
-ಪ್ರತಾಪ್‌, ಬೆಂಗಳೂರು


ನಿಮ್ಮ ಬಾಲ್ಯ ಸ್ನೇಹಿತೆಗೆ ಮದುವೆಯಾಗಿದೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ. ಆಕೆಯೀಗ ಇಬ್ಬರು ಮಕ್ಕಳ ಅಮ್ಮ. ಅಂಥವಳನ್ನು ನೀವು ಪ್ರೀತಿ ಮಾಡುವುದು ಸರಿಯಲ್ಲ. ಅವಳೂ ಈ ನಿರ್ಧಾರಕ್ಕೆ ಬಂದಿರುವುದು ಉಚಿತವಲ್ಲ. ಇದು ದಾಂಪತ್ಯದ್ರೋಹ ಎನಿಸುತ್ತದೆ.

ವಿವಾಹೇತರ ಸಂಬಂಧ ಯಾವುದೇ ಕಾರಣಕ್ಕೂ ಸರಿಯಲ್ಲ. ಇದು ನಿಮ್ಮ ಹಾಗೂ ನಿಮ್ಮ ಸ್ನೇಹಿತೆ ಇಬ್ಬರ ಭವಿಷ್ಯಕ್ಕೂ ಮಾರಕ ಎನಿಸುತ್ತದೆ. ಈ ಕ್ಷಣದಲ್ಲಿ ನಿಮಗೆ ಆಕೆಯ ಮೇಲೆ ಪ್ರೀತಿ ಹುಟ್ಟಬಹುದು. ಆದರೆ ನಿಮ್ಮ ಈ ಸಂಬಂಧದ ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ. ಇಂಥ ನಿರ್ಧಾರ ಬಿಟ್ಟುಬಿಡಿ. ಯಾವುದೇ ಅನುಚಿತ ಸಂಬಂಧ ಇಟ್ಟುಕೊಳ್ಳದೇ ಒಳ್ಳೆಯ ಸ್ನೇಹಿತರಾಗಿಯೇ ಮುಂದುವರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT