ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಜತೆ ದೂರವಾಣಿ ಸಂಖ್ಯೆ ಹಂಚಿಕೊಳ್ಳಲಿದೆ ವಾಟ್ಸ್‌ಆ್ಯಪ್

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾಗತಿಕ ಗೋಪ್ಯತಾ ನೀತಿಯನ್ನು ಪರಿಷ್ಕರಿಸಿರುವ ಮೆಸೇಜಿಂಗ್ ಸೇವಾದಾತ ಸಂಸ್ಥೆ ವಾಟ್ಸ್‌ಆ್ಯಪ್, ಬಳಕೆದಾರರ ದೂರವಾಣಿ ಸಂಖ್ಯೆ ಮಾಹಿತಿಯನ್ನು ತನ್ನ ಮಾತೃಸಂಸ್ಥೆ ಫೇಸ್‌ಬುಕ್ ಜತೆ ಹಂಚಿಕೊಳ್ಳಲಿದೆ. 

ಈ ಮೂಲಕ ತನ್ನ ಜಾಹೀರಾತು ವಲಯವನ್ನು ಫೇಸ್‌ಬುಕ್ ವಿಸ್ತರಿಸಿಕೊಳ್ಳಲಿದೆ. ಆದರೆ ವಾಟ್ಸ್ಆ್ಯಪ್ ಮಾತ್ರ ಜಾಹೀರಾತು ಮುಕ್ತವಾಗಿ ಮುಂದುವರಿಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆ ಜತೆ ಸ್ಮಾರ್ಟ್‌ಫೋನ್‌ನ ಆಪರೇಟಿಂಗ್ ಸಿಸ್ಟಂ (ಒಎಸ್‌) ಮೊದಲಾದ ಮಾಹಿತಿಗಳನ್ನು  ವಾಟ್ಸ್ಆ್ಯಪ್ ಹಂಚಿಕೊಳ್ಳಲಿದೆ. ಯಾವುದೇ ಕಾರಣಕ್ಕೂ ಸಂದೇಶಗಳನ್ನು (ಮೆಸೇಜ್‌) ಮೂರನೇ ವ್ಯಕ್ತಿ ಜತೆ ಹಂಚಿಕೊಳ್ಳುವುದಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

2014ರಲ್ಲಿ ವಾಟ್ಸ್‌ಆ್ಯಪ್ ಅನ್ನು ಫೇಸ್‌ಬುಕ್‌ ಖರೀದಿಸಿದ ಬಳಿಕ ಇದೇ ಮೊದಲ ಬಾರಿಗೆ ಬಳಕೆದಾರರ ಗೋಪ್ಯತಾ ನೀತಿಯನ್ನು ಪರಿಷ್ಕರಿಸಿದೆ.

ಆಕ್ಷೇಪ: ವಾಟ್ಸ್‌ಆ್ಯಪ್ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಕೆದಕಲಿದೆ ಎಂದು ಬಳಕೆದಾರರ ಖಾಸಗಿತನದ ಪ್ರತಿಪಾದಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸಂಸ್ಥೆಯು, ಬಳಕೆದಾರರ ಒಪ್ಪಿಗೆ ಪಡೆದೇ ಮಾಹಿತಿ ಹಂಚಿಕೊಳ್ಳಲಾಗುವುದು ಎಂದಿದೆ.
ಜಾಗತಿಕವಾಗಿ 100 ಕೋಟಿ ಜನರು ವಾಟ್ಸ್‌ಆ್ಯಪ್ ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT