ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ತಾರತಮ್ಯಕ್ಕೆ ಜರೀನಾ ಬೇಸರ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ದೊಡ್ಡ ನಟಿಯರು ‘ಬೋಲ್ಡ್‌ ಸೀನ್‌’ನಲ್ಲಿ ಕಾಣಿಸಿಕೊಂಡರೆ ಪ್ರೇಕ್ಷಕರಿಂದ ಹೊಗಳಿಕೆಯ ಮಾತುಗಳು ಕೇಳಿಬರುತ್ತವೆ. ಅದೇ ಪಾತ್ರವನ್ನು ಅಷ್ಟೊಂದು ಜನಪ್ರಿಯವಲ್ಲದ ನಟಿ ಮಾಡಿದರೆ ಜನರ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಗುತ್ತದೆ’.

ಇದು ನಟಿ ಜರೀನಾ ಖಾನ್ ವಿಶ್ಲೇಷಣೆ.

ನೋಟದಲ್ಲಿ ಕೊಂಚ ಕತ್ರೀನಾ ಕೈಫ್‌ ಅವರನ್ನು ಹೋಲುವಂತಿದ್ದರು, ಬಾಲಿವುಡ್‌ನಲ್ಲಿ ಅದೃಷ್ಟದ ಬಾಗಿಲು ಇವರಿಗೆ ತೆರೆದುಕೊಳ್ಳಲಿಲ್ಲ.

‘ಹೌಸ್‌ಫುಲ್‌ 2’ ಹಿಟ್‌ ಆದನಂತರ ಮತ್ತೆ ಸದ್ದು ಮಾಡಿದ ಜರೀನಾ, ‘ಹೇಟ್‌ ಸ್ಟೋರಿ 3’ ಯಲ್ಲಿ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಜನಪ್ರಿಯ ನಟಿಯರು ಮತ್ತು  ಚಿತ್ರರಂಗದಲ್ಲಿ ಅಷ್ಟೊಂದು ಪರಿಚಿತವಲ್ಲದ ಮುಖವನ್ನು ಕಂಡಾಗ ಜನರು ಯಾಕೆ ಹೀಗೆ ತಾರತಮ್ಯ ಮಾಡುತ್ತಾರೆ ಎಂಬುದು ಇವರ ಪ್ರಶ್ನೆ.

‘ಸ್ಟಾರ್‌ ನಟಿಯರು ಎಂಥಹುದೇ ಪಾತ್ರ ಮಾಡಿದರೂ ಜನರಿಂದ ‘ವಾಹ್‌’, ‘ಓ ಮೈ ಗಾಡ್‌’ ಎಂಬ ಉದ್ಗಾರ ಬರುತ್ತದೆ. ಅದೇ ಪಾತ್ರವನ್ನು ಸಿನಿಮಾದಲ್ಲಿ ಈಗಷ್ಟೆ ಪರಿಚಿತವಾಗುತ್ತಿರುವ ನಟಿಯರು ಅಂಥಹ ಪಾತ್ರ ಮಾಡಿದಾಗ ಅವಗಣನೆಗೆ ಗುರಿಯಾಗಬೇಕಾಗುತ್ತದೆ.

ಇಂತಹ ತಾರತಮ್ಯವನ್ನು ಏಕೆ ಎದುರಿಸಬೇಕಾಗುತ್ತದೆ ಎಂಬುದು ನನಗೆ ಇಲ್ಲಿಯವರೆಗೂ ಅರ್ಥವಾಗಿಲ್ಲ. ಆದರೆ ಇದರ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇಲ್ಲಿ ಕೇವಲ ಕೆಲಸ ಮಾಡಲು ಬಂದಿದ್ದೇನೆ ಅದನ್ನು ಸರಿಯಾಗಿ ಮಾಡುವುದಷ್ಟೇ ನನ್ನ ಕರ್ತವ್ಯ’ ಎಂದಿದ್ದಾರೆ.

‘ಬೋಲ್ಡ್‌ ಪಾತ್ರಗಳಲ್ಲಿ ನಟಿಯರನ್ನು ಕಂಡಾಗ ಅದರ ಕುರಿತು ಪರ, ವಿರುದ್ಧ ಮಾತನಾಡುವವರು ಸಾಕಷ್ಟು ಮಂದಿ ಇದ್ದಾರೆ. ಅದರೆ ಅಂಥ ದೃಶ್ಯಗಳನ್ನು ಅವರು ನೋಡುವುದನ್ನು ನಿಲ್ಲಿಸುವುದಿಲ್ಲ’ ಎಂದಿದ್ದಾರೆ ಜರೀನಾ.

‘ಬೋಲ್ಡ್ ಪಾತ್ರಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ತೆರೆಯ ಮೇಲೆ ನೋಡುವಾಗ ಹಾಟ್‌  ಅನಿಸಬಹುದು. ಆದರೆ ಈ ರೀತಿಯ ದೃಶ್ಯಕ್ಕೆ ಒಳಗಾಗುವ ನಟಿ ಸಾಕಷ್ಟು ಜಾಗೃತೆಯಿಂದ ಇರಬೇಕಾಗುತ್ತದೆ’ ಎನ್ನುತ್ತಾರೆ.

‘ನನಗೆ ಹಲವಾರು ಅಭಿಮಾನಿಗಳಿದ್ದಾರೆ. ಅವರ ಪ್ರೋತ್ಸಾಹಕ್ಕೆ ನಾನು ಋಣಿಯಾಗಿರುತ್ತೇನೆ. ಕೆಲವರಿಗೆ ನಾನು ಇಷ್ಟವಾಗದೆ ಇರಬಹುದು. ಎಲ್ಲರೂ ನಮ್ಮನ್ನು ಮೆಚ್ಚಬೇಕು ಎಂದು ಬಯಸುವುದು ತಪ್ಪಾಗುತ್ತದೆ’ ಎನ್ನುತ್ತಾರೆ ಜರೀನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT