ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು: ಆರೋಗ್ಯದ ಮೂಲ ಬೇರು

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನೀರೇ ನಮ್ಮ ಜೀವನ. ಇಡೀ ವಿಶ್ವವೇ ನೀರಿನಿಂದ ಆವರಿಸಲ್ಪಟ್ಟಿದೆ. ನಮ್ಮ  ಯಾವುದೇ ಕಾರ್ಯವು ನೀರಿಲ್ಲದೇ ಸಾಧ್ಯವೇ ಇಲ್ಲ .  ಈ ಭೂಮಿಯ ಮೇಲೆ ನೀರಿಲ್ಲದೇ ಜೀವಿಸುವುದು ಅಸಾಧ್ಯ. ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲೂ ನೀರು ಬೇಕೇ ಬೇಕು.

ಜೀವಕೋಶದ ವಿಭಜನೆಯಲ್ಲಿ. ಕೀಣ್ವ ಪ್ರಚೋದನೆಯಲ್ಲಿ, ಖನಿಜಯುಕ್ತ ಸಾವಯವ ದ್ರವ್ಯಗಳ ಗುಣಲಕ್ಷಣಗಳಲ್ಲಿ ನೀರು ಸಹಾಯಕವಾಗಿದೆ. ನೀರಿನ ಮುಖ್ಯ ಪಾತ್ರವಿರುವುದು ಆಹಾರದ ಜೀರ್ಣಕ್ರಿಯೆಯಲ್ಲಿ, ಕಲ್ಮಶ / ಮಲಮೂತ್ರಗಳನ್ನು ಹೊರಹಾಕುವಲ್ಲಿ. 

ಅಷ್ಟೇ ಅಲ್ಲದೆ, ಎಲ್ಲ ಜೀವಕೋಶಗಳ ಹುಟ್ಟಿನಿಂದ ಸಾಯುವವರೆಗಾಗುವ ಎಲ್ಲ ಹಾರ್ಮೋನ್‌ಗಳ ವ್ಯತ್ಯಾಸಗಳಲ್ಲಿ ನೀರು ಅನಿವಾರ್ಯ. ದೇಹದ ತಾಪಮಾನವನ್ನು ಸಮದೂಗಿಸುವುದು ನೀರಿನ ಮುಖ್ಯ ಕಾರ್ಯ. ನೀರು ನಮ್ಮ ಶರೀರದ ಇನ್ನೂ ಹಲವು ಕಾರ್ಯಗಳಲ್ಲಿ ಸಹಾಯಕವಾಗಿದೆ.

ನೀರಿನಿಂದ ದೇಹದಲ್ಲಾಗುವ ಮುಖ್ಯ ಕಾರ್ಯಗಳು
ಜೀರ್ಣಕ್ರಿಯೆಯಲ್ಲಿ:
ಜೀರ್ಣಕ್ರಿಯೆಯಲ್ಲಿ ನೀರಿನ ಪಾತ್ರ ಅಪಾರವಾದದ್ದು. ದಿನಾಲೂ ಬೆಳ್ಳಿಗೆ ಒಂದು ಲೋಟ ನೀರು ಕುಡಿಯುವುದರಿಂದ ಅದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ನೀರು ಹಾಗೂ ಇನ್ನೂ ಬೇರೆ ದ್ರವ ಪದಾರ್ಥಗಳು ಆಹಾರ ವಿಭಜನೆಯಲ್ಲಿ ಸಹಾಯಕವಾಗಿದೆ.

ಜೀರ್ಣಕ್ರಿಯೆಯನ್ನು ಅದರ ಸರಿಯಾದ ಸ್ಥಿತಿಯಲ್ಲಿಡಲು ಉಪಕಾರಿ. ಉಗುರು ಬೆಚ್ಚಗಿನ ನೀರು ಆಹಾರವನ್ನು ಬೇಗನೆ ವಿಭಜಿಸಿ, ಜೀರ್ಣ ಮಾಡಲು ಸಹಾಯ ಮಾಡುತ್ತದೆ. ತಂಪುನೀರನ್ನು ಆಹಾರದ ಮೊದಲು ಮತ್ತು ನಂತರ ಕುಡಿಯುವುದರಿಂದ ಅದು ಎಣ್ಣೆಪದಾರ್ಥಗಳನ್ನು ಜೀರ್ಣಿಸುವಲ್ಲಿ ತೊಂದರೆ ಒಡ್ಡುತ್ತದೆಯಲ್ಲದೆ, ಜಿಡ್ಡುಪದಾರ್ಥವು ಕರುಳಿನಲ್ಲಿ ಬೊಜ್ಜಿನ ರೂಪದಲ್ಲಿ ಸಂಗ್ರಹವಾಗುತ್ತದೆ.

ಮಲಬದ್ಧತೆ: ನಾವು ಹೊಟ್ಟೆನೋವಿನ ಸಾಮಾನ್ಯ ಸಮಸ್ಯೆಯನ್ನು ಪ್ರತಿನಿತ್ಯ ಒಂದಲ್ಲೊಂದು ರೀತಿಯಲ್ಲಿ ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ಮಲಬದ್ಧತೆ, ಅಂದರೆ ಆಹಾರ ಸರಿಯಾಗಿ ಜೀರ್ಣವಾಗದೇ ಹೊರಹೋಗುವುದಕ್ಕೆ ತೊಂದರೆ ಉಂಟಾಗುತ್ತದೆ. ಅದಕ್ಕೆ ಮುಖ್ಯ ಕಾರಣ ನಾವು ಸರಿಯಾಗಿ ನೀರು ಕುಡಿಯದಿರುವುದು.

ಮಲಬದ್ಧತೆಯ ಸಮಸ್ಯೆಯಿಂದ ಮುಕ್ತವಾಗಲು ಇರುವ ಸುಲಭವಾದ ಒಂದೇ ಒಂದು ಉಪಾಯವೆಂದರೆ ದಿನನಿತ್ಯ ಖಾಲಿಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಒಂದು ಲೋಟ ನೀರನ್ನು ಕುಡಿಯುವುದು. ಇದರಿಂದ ಆಹಾರವು ಸರಿಯಾಗಿ ವಿಭಜಿಸಿ, ಜೀರ್ಣವಾಗಿ ಕರಳುಗಳಲ್ಲಿ ಯಾವುದೇ ತೊಂದರೆ ಉಂಟಾಗದೇ ಮಲವನ್ನು ಹೊರಹಾಕುವಲ್ಲಿ ಸಹಾಯವಾಗುತ್ತದೆ ಹಾಗೂ ದೇಹಲ್ಲಿ ಸಹಜ ಕ್ರಿಯೆಗಳು ಸರಿಯಾಗಿ ನಡೆಯುತ್ತವೆ.

ನೋವು ಶಮನಕಾರಿ: ಉಗುರು ಬೆಚ್ಚಗಿನ ನೀರು / ಬಿಸಿನೀರನ್ನು ನೈಸರ್ಗಿಕ ಶಕ್ತಿಯುತವಾದ ಮನೆಮದ್ದು ಎಂದು ಕಡೆಗಣಿಸಲಾಗಿದೆ. ಇದು ನೋವನ್ನು ನೀವಾರಿಸುವಲ್ಲಿ ಸಹಾಯಕಾರಿ. ಋತುಚಕ್ರದಲ್ಲಾಗುವ ನೋವು, ತಲೆನೋವುಗಳಂಥ ಹಲವು ನೋವುಗಳಿಗೆ ಸಹಾಯಕಾರಿ.

ಬಿಸಿನೀರಿನ ಉಷ್ಣತೆಯು ಉದರ ಭಾಗದ ಮಾಂಸಖಂಡ / ಸ್ನಾಯುಗಳಿಗೆ ಸ್ತಬ್ಧತೆ ಮತ್ತು ಸೂಕ್ಷ್ಮತೆಯಿಂದ ಉಂಟಾದ ಹಿಡಿತ, ಸೆಳೆತಗಳ ನೋವಿನಿಂದ ಮುಕ್ತಗೊಳಿಸುತ್ತದೆ. ಬಿಸಿನೀರನ್ನು ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. 

ಕೊಬ್ಬನ್ನು ಕಡಿಮೆಗೊಳಿಸುವಲ್ಲಿ:  ಬೀಸಿನೀರನ್ನು ಬೆಳಿಗ್ಗೆ ಸೇವಿಸುವುದು ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಸಹಾಯ  ಮಾಡುತ್ತದೆ. ಬೀಸಿನೀರನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ. ಅದರಿಂದ ದೇಹದ ಪಚನಕ್ರಿಯೆಯಲ್ಲಿ ಸಹಾಯವಾಗುತ್ತದೆ.

ಇದರಿಂದ ದೇಹದಲ್ಲಿರುವ ಅತಿಯಾದ ಕಲ್ಮಶಗಳನ್ನೂ ಬೊಜ್ಜನ್ನುಂಟುಮಾಡುವ ಪದಾರ್ಥಗಳನ್ನು ಸುಟ್ಟುಹಾಕುವಲ್ಲಿ ಸಹಾಯವಾಗುತ್ತದೆ. ದೇಹದ ಎಲ್ಲ ಅಂಗಾಂಶಗಳು, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಅತ್ಯುನ್ನತ ಸಹಕಾರಿ ಬಿಸಿನೀರು. ಬೀಸಿನೀರಿನೊಂದಿಗೆ ನಿಂಬೆಹಣ್ಣನ್ನು ಸೇರಿಸಿ ಸೇವಿಸುವುದರಿಂದ ಬೊಜ್ಜು ಕರಗುತ್ತದೆ.

ರಕ್ತಪರಿಚಲನೆ: ನಮ್ಮ ದೇಹದಲ್ಲಿ ಅತಿಯಾದ ಬೊಜ್ಜು, ಜಿಡ್ಡಿನ ಪದಾರ್ಥ, ಕೊಬ್ಬಿನ ಪದಾರ್ಥ ಸೇರಿದ್ದಲ್ಲಿ ದಿನನಿತ್ಯ ಒಂದು ಲೋಟ ಬಿಸಿನೀರು ಕುಡಿಯುವುದರಿಂದ ನಮ್ಮ ದೇಹದ ನರಮಂಡಲ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಲ್ಲ ಕಲ್ಮಶವನ್ನು ಹೊರಹಾಕಿ ರಕ್ತಪರಿಚಲನೆ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಅಕಾಲಿಕ ವಯಸ್ಸಾಗುವಿಕೆ: ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಾಣುತ್ತದೆ. ಇದಕ್ಕೆ ಉಪಾಯ ದಿನನಿತ್ಯ ಒಂದು ಲೋಟ ಬೀಸಿನೀರನ್ನು ಕುಡಿಯುವುದು, ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಎಲ್ಲ ದೇಹದ ಚರ್ಮದ ಜೀವಕೋಶಗಳಿಗೆ ಚೈತನ್ಯವನ್ನು ನೀಡುತ್ತ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಹಿಳೆಯಲ್ಲಿ  ಹಾರ್ಮೋನ್‌ಗಳು ಹೆಚ್ಚಿರುವ ಕಾರಣ ಬೇಗನೇ ಫಲಿತಾಂಶವನ್ನು ಕಾಣಬಹುದು. ಬೀಸಿನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ದಿನಾಲು ಬೆಳಿಗ್ಗೆ ಸೇವಿಸುವುದು ಆರೋಗ್ಯಕ್ಕೆ ಪೂರಕ. ಬಿಸಿನೀರಿನೊಂದಿಗೆ ನಿಂಬೆಹಣ್ಣನ್ನೂ ಉಪಯೋಗಿಸಬಹುದು.

ತುಂಬ ಬಿಸಿಯಾಗಿರುವ ನೀರನ್ನು ಸೇವಿಸುವುದರಿಂದ ದೇಹದ ಒಳಗಿನ ಅಂಗಾಂಗಗಳಿಗೆ ತೊಂದರೆ ಆಗಬಹುದು. ಹೀಗಾಗಿ ನೀರನ್ನು ಕುದಿಸಿ, ತಣ್ಣಗಾದ ಮೇಲೆ ಕುಡಿಯುವುದು ಉತ್ತಮ.

ಉಷ್ಣೊದಕವು ಕೇವಲ ಆಯಾಸವನ್ನು ಮಾತ್ರ ತಟಸ್ಥಗೊಳಿಸುವುದಿಲ್ಲ. ಇದು ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತದೆ.  ದೇಹವನ್ನು ರೋಗದಿಂದ ಮುಕ್ತವಾಗಲು ಬಿಸಿನೀರು ಸಹಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT