ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರದಲ್ಲಿ ಚಾಲಕ ರಹಿತ ಟ್ಯಾಕ್ಸಿ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸಿಂಗಪುರ(ಎಎಫ್‌ಪಿ): ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿ  ಸೇವೆ ಸಿಂಗಪುರದಲ್ಲಿ ಗುರುವಾರ ಆರಂಭವಾಗಿದೆ. ಪ್ರಾಯೋಗಿಕವಾಗಿ ಇಲ್ಲಿನ ಸಂಶೋಧನಾ ಕ್ಯಾಂಪಸ್‌ ಆವರಣದಲ್ಲಿ   ಮಾತ್ರ ಈ ‘ರೋಬೊ ಟ್ಯಾಕ್ಸಿ’ ಸೇವೆ ಆರಂಭಿಸಲಾಗಿದೆ. ಪ್ರಯೋಗ ಯಶಸ್ವಿಯಾದರೆ  2018ರ ವೇಳೆಗೆ ನಗರದ ಹೃದಯ ಭಾಗದಲ್ಲಿ ಈ ಸೇವೆ ಜಾರಿಮಾಡಲಾಗುವುದು ಎಂದು ಟ್ಯಾಕ್ಸಿಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿರುವ ಅಮೆರಿಕದ ಸ್ಟಾರ್ಟ್‌ ಅಫ್‌ ನುಟೊನೊಮಿ ಹೇಳಿದೆ.

‘ಪರೀಕ್ಷೆಯ ನಂತರ ಗ್ರಾಹಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು’ ಎಂದು ನುಟೊನೊಮಿ ಮುಖ್ಯ ಕಾರ್ಯ ನಿರ್ವಾಹಕ ಹಾಗೂ ಸಹ ಸಂಸ್ಥಾಪಕ ಕಾರ್ಲ ಲೆಗ್ನೆಮ್ಮ ಹೇಳಿದ್ದಾರೆ. ಪ್ರಾಯೋಗಿಕವಾಗಿ ಆರು ಟ್ಯಾಕ್ಸಿಗಳ ಸೇವೆ ಆರಂಭವಾಗಿದೆ. ಇವುಗಳಿಗೆ ಟ್ರಿಪ್‌ಗಳನ್ನು ಸ್ಮಾರ್ಟ್‌ಫೋನ್‌ ಆ್ಯಪ್‌ ಮೂಲಕ ಬುಕ್ ಮಾಡಲಾಗಿತ್ತು. ಆಗಸ್ಟ್ ಅಂತ್ಯದಲ್ಲಿ ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಚಾಲಕರಹಿತ ಕಾರ್‌ ಗಳನ್ನು ಆರಂಭಿಸುವುದಾಗಿ  ಉಬರ್‌ ಕಳೆದ ವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT