ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋವರ್ಸ್‌ ತಂಡದ ಶುಭಾರಂಭ

ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಲೀಗ್‌ ವಲಯ ಮಟ್ಟದ ಸ್ಪರ್ಧೆಗಳಿಗೆ ಚಾಲನೆ
Last Updated 26 ಆಗಸ್ಟ್ 2016, 19:29 IST
ಅಕ್ಷರ ಗಾತ್ರ

ವಿಜಯಪುರ: ಅನುಭವಿ ಆಟಗಾರರನ್ನು ಹೊಂದಿರುವ ಕಲಬುರ್ಗಿಯ ಬಾಗವಾನ್‌ ತಂಡ ಮತ್ತು ಧಾರವಾಡದ ರೋವರ್ಸ್‌ ತಂಡದವರು ನಗರದಲ್ಲಿ ಶುಕ್ರವಾರ ಆರಂಭಗೊಂಡ ಕರ್ನಾಟಕ ಬ್ಯಾಸ್ಕೆಟ್‌ಬಾಲ್ ಲೀಗ್‌ನ ವಲಯ ಮಟ್ಟದ ಟೂರ್ನಿಯ ಮೊದಲ ದಿನ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದರು.

ಬಿ.ಎಲ್‌.ಡಿ.ಇ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಗವಾನ್‌ ತಂಡ ಹೊಸಪೇಟೆಯ ವಿಜಯನಗರ ತಂಡದ ವಿರುದ್ಧ 66–24 ಅಂತರದ ಗೆಲುವು ದಾಖಲಿಸಿತು. ಪಂದ್ಯದ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ ಬಾಗವಾನ್ ತಂಡ ಪ್ರಥಮಾರ್ಧ ಮುಕ್ತಾಯಗೊಂಡಾಗ 33–10ರ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿದ ತಂಡ ಅಂತರವನ್ನು ಹೆಚ್ಚಿಸಿಕೊಂಡು ಜಯದ ನಗೆ ಸೂಸಿತು. ಮಹೇಶ 21 ಪಾಯಿಂಟ್‌ ಹಾಗೂ ಜೈರಾಜ್ 17 ಪಾಯಿಂಟ್‌ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಜಯನಗರ ತಂಡದ ಪರ 9 ಪಾಯಿಂಟ್ ಗಳಿಸಿದ ರಾಹುಲ್ ಮಿಂಚಿದರು.

ಮತ್ತೊಂದು ಪಂದ್ಯದಲ್ಲಿ ಧಾರವಾಡದ ರೋವರ್ಸ್‌ ತಂಡ, ಬಾಗಲಕೋಟೆ ತಂಡವನ್ನು 28–18ರಿಂದ ಮಣಿಸಿತು. ಪ್ರಥಮಾರ್ಧದಲ್ಲಿ ರೋವರ್ಸ್‌ ತಂಡ 12–6 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಎದುರಾಳಿಗಳು ಮೇಲುಗೈ ಸಾಧಿಸಲು ಬಿಡದ ತಂಡ ಸುಲಭವಾಗಿ ಜಯ ಗಳಿಸಿತು. ತಂಡದ ಪರ ಸುನೀಲ 15 ಪಾಯಿಂಟ್ಸ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT