ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಒತ್ತಾಯ, ಪ್ರತಿಭಟನೆ

Last Updated 27 ಆಗಸ್ಟ್ 2016, 8:18 IST
ಅಕ್ಷರ ಗಾತ್ರ

ನಾಗಮಂಗಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸದಸ್ಯರು ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಸಂವಿ ಧಾನದಲ್ಲಿ ಅವರು ಯಾರೂ ಮೇಲಲ್ಲ, ಕೀಳಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. ಆದರೆ ಸರ್ಕಾರಗಳು ಅಸಮಾನತೆ, ಜಾತೀಯತೆ, ಮೇಲು ಕೀಳು ಎಂಬ ಮಂತ್ರವನ್ನು ಪರೋಕ್ಷವಾಗಿ ಪ್ರೋತ್ಸಾಹಿಸಿಕೊಂಡು ಬಂದಿವೆ. ಬಡವರನ್ನು ಬಡವರನ್ನಾಗಿ, ಹಿಂದುಳಿದ ಮತ್ತು ದಲಿತರನ್ನು ಇನ್ನೂ ಅಸ್ಪೃಶ್ಯತೆಗೆ ದೂಡುವ ಕಾರ್ಯಕ್ಕೆ ಮುಂದಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಡವರ, ದಲಿತರ ಬಗರ್ ಹುಕುಂ ಅರ್ಜಿಗಳಿಗೆ ಕಾನೂನು ರೀತಿಯ ಫಲಾನುಭವಿ ಸಾಗುವಳಿ ಚೀಟಿ ನೀಡಬೇಕು. ಗ್ರಾಮೀಣ ಪ್ರದೇಶದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ- ಯುಕೆಜಿಯಿಂದ ಆಂಗ್ಲ ಮಾಧ್ಯಮ ವ್ಯಾಸಂಗಕ್ಕೆ ಅವಕಾಶ, ಶಿಕ್ಷಕರ ಕೊರತೆ ನೀಗಿಸುವುದು, ಸರ್ಕಾರಿ ಶಾಲೆಗಳನ್ನು ಮುಚ್ಚದಿರುವುದು, ಕಾವೇರಿ ಜಲಾನಯನ ಅಭಿವೃದ್ಧಿ ನಿಗಮ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಕೊರೆಸಿದ ಕೊಳವೆ ಬಾವಿಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕೊಡಿಸಬೇಕೆಂದು ಒತ್ತಾಯಿಸಿದರು.

ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವುದು, ದಲಿತರಿಗೆ ಮಂಜೂರಾಗಿರುವ ರುದ್ರಭೂಮಿಯನ್ನು ಅಳತೆ ಮಾಡಿಸಿ ವಶಕ್ಕೆ ನೀಡುವುದು, ವಿದ್ಯಾರ್ಥಿ ವೇತನ ವಿಳಂಬ ಮಾಡದೇ ನೀಡುವುದು, ನಾಗಮಂಗಲ ಪಟ್ಟಣದಲ್ಲಿ ಪೌರ ಕಾರ್ಮಿಕರು ವಾಸಿಸುತ್ತಿರುವ ಸ್ಥಳಗಳಿಗೆ ಹಕ್ಕುಪತ್ರ ನೀಡುವುದು, ವಿದ್ಯುತ್ ನೀಡುವುದು, ಮಹಿಳಾ ಸಂಘಟನೆಯ ಸದಸ್ಯರಿಗೆ ಪ್ರೋತ್ಸಾಹಧನ ಹೆಚ್ಚಿಸುವುದು, ಪರಿಶಿಷ್ಟವರ್ಗಗಳು ವಾಸಿಸುವ ಎಲ್ಲ ಗ್ರಾಮಗಳಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಬಳಿಕ ಸದಸ್ಯರು ತಹಶೀಲ್ದಾರ್ ಸಿ.ಶಿವಣ್ಣ ಅವರಿಗೆ ಮನವಿಪತ್ರ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಜಿಲ್ಲಾ ಸಂಘಟನಾ ಸಂಚಾಲಕ ಕೆ.ಜಿ.ಶಿವಮೂರ್ತಿ,  ಜಿಲ್ಲಾ ಮುಖಂಡ ಎಂ.ನಾಗರಾಜಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಸಂಚಾಲಕ ಡಿ.ಟಿ.ಪುಟ್ಟಸ್ವಾಮಿ, ಸಂಘಟನಾ ಸಂಚಾಲಕ ಎಂ.ಕೆ.ಶಿವಕುಮಾರ್, ಜಿ.ಎಚ್.ರವಿ, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT