ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎ.ಕೆ. ಸುಬ್ಬಯ್ಯ ರಾಜಕೀಯ ನಿವೃತ್ತಿ ಪಡೆಯಲಿ’

Last Updated 27 ಆಗಸ್ಟ್ 2016, 9:21 IST
ಅಕ್ಷರ ಗಾತ್ರ

ಮಡಿಕೇರಿ: ‘ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಅವರು ರಾಜಕೀಯ ನಿವೃತ್ತಿ ಪಡೆದು ವೃದ್ಧಾಶ್ರಮ ಸೇರುವುದು ಒಳ್ಳೆಯದು’ ಎಂದು ನಾಪೋಕ್ಲು ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ತೆನ್ನಿರ ಮೈನಾ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತಿಚೇಗೆ ನಡೆದ ಬೆಟ್ಟಗೇರಿಯ ನಂದ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಸ್ಥಳದ ಆಗಮಿಸದೇ, ವಸ್ತು ಸ್ಥಿತಿ ತಿಳಿಯದೇ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿ ದ್ದಾರೆ’ ಎಂದು ಆರೋಪಿಸಿದರು.

ಅಮಾಯಕ ಹೆಣ್ಣು ಮಗಳು ಮತ್ತು ಅವರ ಮಕ್ಕಳ ಬಗ್ಗೆ ಕೇವಲವಾಗಿ ಹೇಳಿಕೆಗಳನ್ನು ನೀಡಿ ಅವಮಾನ ಮಾಡಿದ್ದಾರೆ. ಸುಳ್ಳು ಹೇಳಿಕೆ ನೀಡಲು ಪ್ರಚೋದಿಸುತ್ತಿರುವ ಅವರ ಹಿಂಬಾಲಕರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಸೂದನ ಎಸ್‌. ಈರಪ್ಪ ಮಾತನಾಡಿ, ನಂದ ಅವರ ಮನೆಗೆ ತೆರಳುವ ದಾರಿಗೆ ಚಿತ್ರಾ ಮತ್ತು ಇಬ್ರಾಹಿಂ ಅವರು ಬಾಳೆಗಿಡ ನೆಟ್ಟು ದಾರಿ ಮುಚ್ಚಿರುವುದರಿಂದ ಈ ಬಗ್ಗೆ ವಿಚಾರಿಸಿದಾಗ ಪೊಲೀಸ್‌ ಪುಕಾರು ನೀಡಿ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದು ಮಗನ ಕೈಯಲ್ಲಿ ಮರಣ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಐಪಿಸಿ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆಯಲ್ಲಿ ಪೊಲೀಸ್‌ ಇಲಾಖೆ ವಿಶ್ವಾಸಾರ್ಹ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಸಚಿವರು ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮೃತ ನಂದ ಅವರ ಪತ್ನಿ ಪ್ರೇಮಾ, ಮೃತರ ಸಹೋದರ ಕಟ್ಟಿ ಗಿರೀಶ್‌, ಓಂ ಯುವಕ ಸಂಘದ ಅಧ್ಯಕ್ಷ ಎ. ಯತೀಶ್‌, ಉತ್ತಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT