ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಮುಸ್ಲಿಂ ಯುವಕನ ವರಿಸಿದ ಹಿಂದೂ ಯುವತಿ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ಹಿಂದು ಧರ್ಮದ ಯುವತಿಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬಾಲ್ಯದ ಗೆಳೆಯ ಬಿಲಾಲ್‌ ಖೈಮಾಖನಿಯನ್ನು ಮದುವೆಯಾದ ಅಪರೂಪದ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಶನಿವಾರ ನಡೆದಿದೆ.

ಬಾಲ್ಯದ ಗೆಳೆಯನನ್ನು ವರಿಸಲು ಇಚ್ಛಿಸಿದ ಮಗಳಿಗೆ ಗೋವರ್ಧನ್‌ ದಾಸ್‌ ಖತ್ರಿ ಕುಟುಂಬದವರು ಸಮ್ಮತಿ ನೀಡಿದ್ದರು. ಗೋವರ್ಧನ ದಾಸ್‌ ಮತ್ತು ವರನ ಕುಟುಂಬದವರು ಇಲ್ಲಿಯ ಹತುಂಗೊ ಪಟ್ಟಣದ ನೆರೆಯ ನಿವಾಸಿಗಳು. ಹಾಗಾಗಿ ಎರಡೂ ಕುಟುಂಬದ ಮಧ್ಯೆ ಗಾಢವಾದ ಸ್ನೇಹ ಬೆಳೆದಿತ್ತು.

‘ಮಗಳು ಬಾಲ್ಯದ ಸ್ನೇಹಿತನನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ ನಂತರ ಕುಟುಂಬದ ಎಲ್ಲ ಸದಸ್ಯರನ್ನು ಕರೆದು ಖತ್ರಿ ಮಾತನಾಡಿದರು’ ಎಂದು ಎರಡೂ ಕುಟುಂಬಕ್ಕೆ ಆಪ್ತರಾಗಿರುವ ಅಹಮದ್‌ ಸಂಜರಾನಿ ತಿಳಿಸಿದ್ದಾರೆ.

ಮದುವೆಯ ನಂತರ ಏರ್ಪಡಿಸಲಾಗಿದ್ದ ಔತಣಕೂಟಕ್ಕೆ ಅಪಾರ ಸಂಖ್ಯೆಯಲ್ಲಿ ವಧು–ವರರ ಸ್ನೇಹಿತರು, ಸಂಬಂಧಿಕರು ಬಂದಿದ್ದರು. ಪಾಕಿಸ್ತಾನದಲ್ಲಿ ಹಿಂದು ಯುವತಿಯರನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿವೆ ಎನ್ನುವ ದೂರುಗಳಿವೆ. ಹಿಂದೂ  ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಧ್ವನಿ ಎತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT