ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಗೆ 9 ರಾಜ್ಯಗಳ ಬೆಂಬಲ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿ ಮಾಡುವುದಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಕೇವಲ ಮೂರು ವಾರಗಳಲ್ಲಿ  9 ರಾಜ್ಯಗಳ ವಿಧಾನಸಭೆಗಳು ಒಪ್ಪಿಗೆ ಸೂಚಿಸಿ ಗೊತ್ತುವಳಿ ಅಂಗೀಕರಿಸಿವೆ. ಸಂವಿಧಾನದ 122ನೇ ತಿದ್ದುಪಡಿ ಮಸೂದೆಯು ಕಾನೂನು ಆಗಬೇಕಾದರೆ ಅರ್ಧದಷ್ಟು ರಾಜ್ಯಗಳು ಮಸೂದೆಯನ್ನು ಬೆಂಬಲಿಸಿ ಗೊತ್ತುವಳಿ ಅಂಗಿಕರಿಸಬೇಕು.

ಅಸ್ಸಾಂ, ಬಿಹಾರ, ಜಾರ್ಖಂಡ್, ಹಿಮಾಚಲಪ್ರದೇಶ, ಛತ್ತೀಸಗಡ, ಗುಜರಾತ್, ಮಧ್ಯಪ್ರದೇಶ, ದೆಹಲಿ ಮತ್ತು ನಾಗಾಲ್ಯಾಂಡ್ ರಾಜ್ಯಗಳು  ಗೊತ್ತುವಳಿ ಅಂಗೀಕರಿಸಿವೆ.ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಹರಿಯಾಣ ವಿಧಾನಸಭೆಗಳು ಸೋಮವಾರ ಈ ವಿಚಾರವನ್ನು ಚರ್ಚಿಸಿ ಗೊತ್ತುವಳಿ ಅಂಗೀಕರಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT